ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ

0
3

ಸವಣೂರ: ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರಿಂದ ಕೆಲಸ ಮಾಡಿಕೋಡುವ ಉದ್ದೆÃಶದಿಂದ ಹಣಕ್ಕೆ ಆಮೀಷ ಒಡ್ಡಿದರೆ ಅಂತಹವರ ವಿರುದ್ಧ ಯಾರಿಗೂ ಭಯಗೊಳ್ಳದೆ ನೇರವಾಗಿ ಭ್ರಷ್ಟಾಚಾರ ನಿಗ್ರಹ ಪೊಲೀಸ ಠಾಣೆಗೆ ಹಾವೇರಿಗೆ ಬಂದು ದೂರನ್ನು ನೀಡಿದರೆ ತಕ್ಷಣ ಲಂಚ ಪಡೆಯುವ ನೌಕರನನ್ನು ಬಂದನ ಮಾಡುವದಾಗಿ ಭ್ರಷ್ಟಾಚಾರ ನಿಗ್ರಹ ಪೊಲೀಸ ಪಿಐ ಸುದರ್ಶನ ಪಟ್ಟಣಕೊಡೆ ಹೇಳಿದರು.

ಪಟ್ಟಣದ ಉಪವಿಭಾಗಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಭ್ರಷ್ಟಾಚಾರ ನಿಗ್ರಹ ಪೊಲೀಸ ಠಾಣೆ ಹಾವೇರಿ ಇವರ ಸಹೋಗದಲ್ಲಿ ಸಾರ್ವಜನಿಕ ಅಹವಾಲು ಸ್ವಿÃಕಾರ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೆÃಶಿಸಿ ಮಾತನಾಡಿದರು, ಭ್ರಷ್ಠಾಚಾರ, ಲಂಚವತಾರ ಇಂತಹ ಸಮಸ್ಯಗಳನ್ನು ದೂರ ಮಾಡಲು ಎಸಿಬಿ ಅಧಿಕಾರಿಗಳ ಜೊತೆ ಕೈಜೋಡಿಸಿದಾಗ ಮಾತ್ರ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯ. ಹಾಗೂ ಸರ್ಕಾರಿ ಇಲಾಖೆಯಲ್ಲಿ ಅರೇ ಸರ್ಕಾರಿ ಸೇವೆಗೆ ಸೇರಿ ಇಲಾಖೆಯಲ್ಲಿ ಭಾರಿ ಲಂಚ ಪಡೆಯುವ ವ್ಯಕ್ತಿಗಳನ್ನು ಆರೋಪಿಗಳನ್ನಾಗಿಸದೆ. ಅಲ್ಲಿರುವ ಅಧಿಕಾರಿಗಳನ್ನು ಭ್ರಷ್ಟ ಅಧಿಕಾರಿಗಳು ಎಂದು ಪರಿಗಣಿಸಿ ಅಂತವರ ಮೇಲೆ ಕಾನುನೂ ಕ್ರಮಕ್ಕೆ ಮುಂದಾಗುವದಾಗಿ ಹೇಳಿ ಲಂಚ ಪಡೆಯುವದು ಮತ್ತು ಕೊಡುವದು ಅಫರಾದ ಭ್ರಷ್ಠಾಚಾರ ಮುಕ್ತ ಸಮಾಜಕ್ಕಾಗಿ ಎಸಿಬಿಯೊಂದಿಗೆ ಕೈಜೋಡಿಸಿ ಎಂದರು.
ಈ ಸಭೆಯಲ್ಲಿ ರುದ್ರಗೌಡ ಪಾಟೀಲ, ಎ.ಆರ್.ಕುಲಕರ್ಣಿ. ಪ್ರಕಾಶ ಬಾರ್ಕಿ, ಕರೆಯಪ್ಪ ಹರಿಜನ, ಗುತ್ತೆÃಪ್ಪ ಹುಲ್ಮನಿ, ಕಲ್ಲ ಹೊಸಳ್ಳಿ, ಕೆ.ಪಿ.ಪಟ್ಟಣಶೆಟ್ಟಿ, ಬಸಪ್ಪ ತಳವಾರ, ಮೌನೇಶ ಬಡಿಗೇರ, ಸಾವಿತ್ರಿ ಮುಗಳಿಕಟ್ಟಿ, ಕಾವ್ಯ ಅಕ್ಕೂರ, ಶಾರದಾ ಗೂಜನೂರ, ಶಶಿಕಲಾ ಕಳ್ಳಿಮಠ, ಉಮಾ ಬಣದೂರಮಠ, ರಾಮಣ್ಣ ಮಾಸನಕಟ್ಟಿ, ಬಸವಣೇಪ್ಪ ಕೇಲಗೇರಿ, ನಾಗನಗೌಡ ಕೊಪದ, ಸೋಮಲಪ್ಪ ಲಮಾಣಿ, ಲಕ್ಷಿö್ಮÃ ಹೊಂಬಳ, ಹೊನ್ನಪ್ಪ ವಗ್ಗನವರ, ಶಿವರಾಜ ಅಕ್ಕೂರ ಹಾಗೂ ಇತರರು ಇದ್ದರು.

loading...