ಮಕ್ಕಳಲ್ಲಿರುವ ಸೃಜನಾತ್ಮಕ ಅಭಿವ್ಯಕ್ತಿಗೆ ವೇದಿಕೆ ಬೇಕು

0
50

ಕನ್ನಡಮ್ಮ ಸುದ್ದಿ-ಧಾರವಾಡ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ನಾಟಕಗಳು ಪ್ರಮುಖ ಕಲಿಕಾ ಮಾಧ್ಯಮವಾಗಿಯೂ ಕಾರ್ಯನಿರ್ವಹಿಸುತ್ತವೆ. ಅಭಿನಯ, ನೃತ್ಯ, ಮಾತು ಮತ್ತು ಹಾಡುಗಾರಿಕೆಯ ಆಸಕ್ತಿ ಬೆಳೆಯುವಲ್ಲಿಯೂ ನಾಟಕಗಳು ಸಹಾಯಕವಾಗಿವೆ ಎಂದು ರಂಗ ನಿರ್ದೇಶಕ ಬಿ.ಐ. ಈಳಿಗೇರ ಹೇಳಿದರು.
ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಪಠ್ಯಾಧಾರಿತ ಮಕ್ಕಳ ನಾಟಕೋತ್ಸವ-2017’ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಪಠ್ಯಾಧಾರಿತ ಮಕ್ಕಳ ನಾಟಕಗಳು ಶಾಲಾ ಮಕ್ಕಳಲ್ಲಿರುವ ಸೃಜನಾತ್ಮಕ ಅಭಿವ್ಯಕ್ತಿಗೆ ವೇದಿಕೆಯಾಗುವ ಜೊತೆಗೆ ಅಭಿನಯದೊಂದಿಗೆ ಕಲಿಕೆ ಮನದಟ್ಟಾಗುತ್ತದೆ ಎಂದರು.
ಅಧ್ಯಾಪಕಿ ಸುನಂದಾ ಬೆನ್ನೂರಹಿರೇಮಠ, ಗುರುಮೂರ್ತಿ ಯರಗಂಬಳಿಮಠ, ರಂಗ ಪರಿಸರದ ಅಧ್ಯಕ್ಷ ವಿಠ್ಠಲ ಕೊಪ್ಪದ, ಎನ್.ಎಂ. ಪಾಟೀಲ, ಶಂಕರ ಗಂಗಣ್ಣವರ, ಶಿವಶಂಕರ ಹಿರೇಮಠ, ಲೇಖಕ ಮೋಹನ ಚೆನ್ನಿ, ಸಿ.ಐ. ಶೀಲವಂತ ಉಪಸ್ಥಿತರಿದ್ದರು. ಕೆ.ಎಚ್. ನಾಯಕ ಸ್ವಾಗತಿಸಿದರು. ಜಗುಚಂದ್ರ ಕೂಡ್ಲ ವಂದಿಸಿದರು.

loading...