ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿ: ವಿ ಶ್ರೀಶಾನಂದ

0
34

ಧಾರವಾಡ : ಮಕ್ಕಳನ್ನು ಸ್ವಚ್ಛಂದ ವಾತಾವರಣದಲ್ಲಿ ಬೆಳೆಯಲು ಬಿಡಬೇಕು, ಒಳ್ಳೆಯ ಅಲೋಚನೆಗಳನ್ನು ಮನಮುಟ್ಟುವಂತೆ ತಿಳಿಸಿದಾಗ ಮಾತ್ರ ಒಳ್ಳೆಯ ಪರಿಣಾಮ ಉಂಟಾಗುವುದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧಿಶರಾದ ವಿ ಶ್ರೀಶಾನಂದ ಹೇಳಿದರು.
ಸಾಂಸ್ಕøತಿಕ ಸಮುಚ್ಚಯದಲ್ಲಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಗಳ ತಿಳುವಳಿಕೆ ನೀಡಬೇಕು. ಅನುಕರಣೆ ಮಾನವನ ಹುಟ್ಟು ಗುಣ ಮಕ್ಕಳಿಗೆ ಅನುಕರಣೆಯ ಬಗ್ಗೆ ತಿಳಿಸುತ್ತ ಒಳ್ಳೆಯ ಅನುಕರಣೆ ಯಾವುದು ಹಾಗೂ ಕೆಟ್ಟ ಅನುಕರಣೆ ಯಾವುದು ಎಂಬ ಬಗ್ಗೆ ತಿಳಿಸಿಕೊಡಬೇಕು. ನಮ್ಮ ಪರಿಸ್ಥಿತಿಯ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಮಕ್ಕಳಿಂದ ಸಲಹೆಗಳನ್ನು ತೆಗೆದುಕೊಳ್ಳುವುದು ಕೂಡ ಒಂದು ಮಹತ್ವದ ಹೆಜ್ಜೆÀ. ವಯಸ್ಸಿಗೆ ಬಂದ ಮಕ್ಕಳನ್ನು ಗೆಳೆಯರಂತೆ ನೋಡಿಕೊಳ್ಳಬೇಕು ಎಂದರು.
ಒಂದೊಮ್ಮೆ ಮಕ್ಕಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೂ ಪಾಲಕರಾದವರು ಒಬ್ಬರನ್ನು ಹಿಯಾಳಿಸುವುದು ಹಾಗೂ ಮತ್ತೊಬ್ಬರನ್ನು ಹೊಗಳುವುದು ಮಾಡಬಾರದು, ಮಕ್ಕಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿ ಮತ್ತೊಂದು ಅವಕಾಶ ಇರುವುದರ ಬಗ್ಗೆ ತಿಳುವಳಿಕೆ ನೀಡಬೇಕು. ಹದಿ ಹರೆಯದ ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಮೊಬೈಲ್‍ಗಳ ವ್ಯಾಮೋಹ ಹೆಚ್ಚುತ್ತಿದ್ದು, ಅದರಿಂದ ಆಗುವ ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಇರುವುದಿಲ್ಲ. ಅದನ್ನು ಪಾಲಕರಾದವರು ಒಳ್ಳೆಯ ರೀತಿಯಲ್ಲಿ ತಿಳಿಸಿದಾಗ ಮಾತ್ರ ಸುತ್ತಮುತ್ತಲಿನ ಪರಿಸರವನ್ನು, ಸಂಬಂಧಗಳÀನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು. ದಾರಿ ತಪ್ಪಿದ ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ಪೊಲೀಸರ ಪಾತ್ರ ಮತ್ತು ಬಾಲನ್ಯಾಯ ಮಂಡಳಿಯ ಪಾತ್ರ ಅತೀ ಮುಖ್ಯವಾದದ್ದು ಎಂದರು.
ಡಿಸಿಪಿ, ಜಿನೇಂದ್ರ ಖನಗಾವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಡಾ. ಬಿ. ಉಷಾ, ಡಾ. ರವೀಶ್ ಬಿ.ಎನ್. ಡಾ. ಸೋಮಶೇಖರ ಬಿಜ್ಜಳ, ಗಾಯತ್ರಿ ಹೆಗಡೆ, ಡಾ. ಸುಜ್ಞಾನಿ ದೇವಿ ಪಾಟೀಲ್, ಅಶೋಕ್ ಎಸ್. ಕೋರಿ, ಡಾ. ಗೀತಾ ಪಾಸ್ತೆ, ಡಾ. ಪೂರ್ಣಿಮ ಗೌರೋಜಿ ಉಪಸ್ಥಿತರಿದ್ದರು. ನಿಂಗಪ್ಪ ಮಡಿವಾಳರ ನಿರೂಪಿಸಿದರು. ಶ್ರೀಮತಿ ದೀಪಾ ಜಾವೂರ ವಂದಿಸಿದರು.

loading...

LEAVE A REPLY

Please enter your comment!
Please enter your name here