ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ: ಡಾ. ಸುರೇಶ

0
68

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಮಕ್ಕಳು ನಮ್ಮ ಭವ್ಯ ಭಾರತದ ನಿಜವಾದ ಆಸ್ತಿಯಾಗಿದ್ದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಡಾ. ಸುರೇಶ ಪರ್ವತೀಕರ ಹೇಳಿದರು.
ಅವರು ಸ್ಥಳೀಯ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಅಂತರ್‍ರಾಷ್ಡ್ರೀಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವ ಗುಣ ಪಾಲಕರಲ್ಲಿ ಬೆಳೆಯಬೇಕಾಗಿದೆ ಎಂದು ಹೇಳಿದರು.

ಸಂಸ್ಥೆಯ ಉಪಚೇರವiನ್ ಎಸ್.ಎಸ್.ಎಣ್ಣಿ ಮಾತನಾಡಿ, ಮಕ್ಕಳ ಮನಸ್ಸÀನ್ನು ಯಾರು ಗೆಲ್ಲುತ್ತಾರೋ ಅವರು ನಿಜವಾದ ಶ್ರೇಷ್ಠ ವ್ಯಕ್ತಿ ಎನಿಸಿಕೊಳ್ಳುತ್ತಾರೆ. ಮಕ್ಕಳ ಮನಸ್ಸನ್ನು ಅರಿತು ಪಾಠ ಬೋಧಿಸಿದಾಗ ಅದರ ಫಲ ದೊರೆಯುತ್ತದೆ ಎಂದು ಹೇಳಿದರು. ಗುರುಬಸವ ದೇವರು ಸಾನಿಧ್ಯ ವಹಿಸಿದ್ದರು. ಸಿದ್ದಬಸಪ್ಪ ಕೆಲೂಡಿ, ಬಿ.ವಿ.ಚಿಂದಿ ಇದ್ದರು. ಶಾಲೆಯ ಪ್ರಾಂಶುಪಾಲ ಅಶೋಕ ತುಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಶಿಕ್ಷಕರಿಗಾಗಿ ಹಾಗೂ ಮಕ್ಕಳಿಗಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸವಿತಾ ಶೇಖಾ ಸ್ವಾಗತಿಸಿದರು. ಅಂಜುಮ್ ಸೊಲ್ಲಾಪೂರ ನಿರೂಪಿಸಿದರು. ರಾಧಾ ಮದಕಟ್ಟಿ ವಂದಿಸಿದರು.

loading...