ಮಕ್ಕಳಿಗೆ ಮುಗ್ಗು ವಾಸನೆಯ ಶೇಂಗಾ ಬೀಜ ವಿತರಣೆ: ಪಾಲಕರಲ್ಲಿ ಆತಂಕ

0
54

ಕನ್ನಡಮ್ಮ ಸುದ್ದಿ-ನಾಲತವಾಡ:ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮುಗ್ಗು ವಾಸನೆಯುಳ್ಳ ಕಳಪೆ ಹಾಗೂ ವಿಷಯುಕ್ತ ಶೇಂಗಾ ಬೀಜಗಳನ್ನು ವಿತರಿಲಾಗಿದ್ದು, ಈ ಅಂಶ ಪಟ್ಟಣದ ಅಂಗನವಾಡಿ ಕೇಂದ್ರಗಳಲ್ಲಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು (ಮಹಿಳಾ ಪೂರಕ ಪೌಷ್ಠಿಕ ಆಹಾರ ತಯಾರಿಕಾ ಮತ್ತು ತರಬೇತಿ ಕೇಂದ್ರವು) ಶೇಂಗಾ ವಿತರಣೆಯ ಹೊಣೆ ಹೊತ್ತಿದ್ದು ಪಟ್ಟಣದ ಹಲವು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಿದ್ದು. ಇದು 3ನೇ ಬಾರಿ ಎನ್ನಲಾಗಿದೆ.
ಕೇಂದ್ರಗಳಿಗೆ ವಿತರಿಸಲಾದ ಶೇಂಗಾ ಬೀಜಗಳು ತನ್ನ ಸತ್ವ ಕಳೆದುಕೊಂಡಿದ್ದಲ್ಲದೇ ಜೊತೆಗೆ ಹುಳುಕುಗೊಂಡು ಜೊಂಡು ಗಟ್ಟಿದ್ದು ಮಕ್ಕಳು ತಿನ್ನಲೂ ಸಹ ಹಿಂದೇಟು ಹಾಕಿದ್ದಾರೆ. ಪ್ರತಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಶನಿವಾರ ಶೇಂಗಾ ವಿತರಿಸುವ ಮೂಲಕ ಮಕ್ಕಳಲ್ಲಿ ಪೌಷ್ಠಿಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಶೇಂಗಾ ವಿತರಣೆ ಯೋಜನೆ ಜಾರಿಗೊಳಿಸಿದೆ. ವಿತರಕರ ಗೊಲ್‌ಮಾಲ್‌ ಚಾಣಾಕ್ಷತನದಿಂದ ಇಲ್ಲಿ ನೆಡೆಯುತ್ತೀರುವುದೇ ಬೇರೆ ಎಂಬಂತೆ ಮಕ್ಕಳ ಕಾಳಜಿ ಬದಿಗೊತ್ತಿ ಮನಬಂದಂತೆ ಕಳಪೆ ಶೇಂಗಾ ಬೀಜಗಳನ್ನು ಅವ್ಯಾಹತವಾಗಿ ವಿತರಣೆ ಮಾಡುತ್ತೀರುವ ಅಂಶ ಬೆಳಕಿಗೆ ಬರುತ್ತಿದ್ದಂತೆಯೇ ಮಕ್ಕಳು ಶೇಂಗಾ ತಿನ್ನದೇ ದೂರ ಉಳಿದಿದ್ದಾರೆ.
ಮುಗ್ಗು ಹಾಗೂ ವಿಷಯುಕ್ತ ಶೇಂಗಾ ಬೀಜಗಳು ವಿತರಣೆ ಮಾಡಲಾಗುತ್ತಿದ್ದು ಮಕ್ಕಳು ಶೇಂಗಾ ತಿನ್ನುವ ಪದ್ದತಿಯಿಂದ ದೂರ ಉಳಿಯುತ್ತೀರುವ ಅಂಶವೂ ಸಹ ಪಾಲಕರಿಂದ ಗಮನಕ್ಕೆ ಬಂದಿದ್ದು ಅಂಗನವಾಡಿ ಕಾರ್ಯಕರ್ತೆಯರಲ್ಲೂ ಸಂಕಷ್ಟ ಉಂಟು ಮಾಡಿದೆ. ಪೌಷ್ಠಿಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಗುಣಮಟ್ಟದ ಆಹಾರಕ್ಕೆ ಗಮನ ಹರಿಸುತ್ತಿಲ್ಲ ಎಂಬ ಅಂಶವು ಮುಗ್ಗು ವಾಸನೆಯ ಶೇಂಗಾ ವಿತರಣೆಯಿಂದ ಕಂಡು ಬಂದಿದೆ.
ಪರೀಕ್ಷೆ ಅಗತ್ಯ: ಅವ್ಯಾಹತವಾಗಿ ಇಂತಹ ಕಳಪೆ ಗುಣಮಟ್ಟದ ಶೇಂಗಾ ಬೀಜಗಳನ್ನು ವಿತರಿಸಲಾಗುತ್ತಿದ್ದ ಅಂಶ ಪಾಲಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಪ್ರಮುಖ ಪಾತ್ರ ವಹಿಸುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ವಿತರಿಸಲ್ಪಡುವ ಶೇಂಗಾ ಬೀಜಗಳನ್ನು ಪರೀಕ್ಷೆ ಮಾಡಿ ಆಯಾ ಕೇಂದ್ರಗಳಿಗೆ ವಿತರಣೆಗೆ ಅವಕಾಶ ನೀಡಬೇಕು ಎಂದು ಪ್ರಜ್ಞಾವಂತರ ಆಗ್ರಹವಾಗಿದೆ.

loading...