ಮಕ್ಕಳೇ ರಾಷ್ಟ್ರದ ಸಂಪತ್ತು : ಎಂ.ಬಾಲಚಂದ್ರನ್

0
44

ಕೊಪ್ಪಳ : ಶಿಕ್ಷಣ ಮಗುವಿನ ಮೂಲಭೂತ ಹಕ್ಕು.ಪ್ರತಿಯೊಂದು ಮಗುವು ಶಿಕ್ಷಣವನ್ನು ಪಡೆದು, ಸಾಕ್ಷರರಾಗಬೇಕು. ಕೇವಲ ಪುಸ್ತಕದ ಜ್ಞಾನವೇ ಪರಿಪೂರ್ಣವಲ್ಲ. ಬದಲಾಗಿ ಮಕ್ಕಳು ಸರ್ವತೋಮುಖವಾಗಿ ಬೆಳವಣಿಗೆ ಆಗಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆ ಆಗಿದೆ. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಎಂದು ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಎಂ ಬಾಲಚಂದ್ರನ್ ಕರೆ ನಿಡಿದರು.

ನಗರದ ವಾಸವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದಾಗ ಮಾತ್ರ, ಮಕ್ಕಳು ರಾಷ್ಟ್ರದ ನಿಜವಾದ ಸಂಪತ್ತಾಗತ್ತಾರೆಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾತಿಯ ಸದಸ್ಯರಾದ ಗವಿಸಿದ್ದಪ್ಪ ಕರಡಿ ಮಾತನಾಡಿ
ಶಿಕ್ಷಕರು ಕೇವಲ ವಿಷಯ ಕಲಿಸುವವರಲ್ಲ ಬದಲಾಗಿ ದೇಶದ ಭವಿಷ್ಯ ನಿರ್ಮಾಣಮಾಡುವವರು.ನಿರ್ಣಾಯಕರು ಯಾವುದೇ ತಾರತಮ್ಮ ಮಾಡದೇ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ.ಕೊಪ್ಪಳದ ಹೆಸರನ್ನು ರಾಷ್ಡ್ರಮಟ್ಟದಲ್ಲಿ ಬೆಳಗಿಸುವಂತೆ ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಜುಲ್ಲು ಖಾದರ್ ಖಾದ್ರಿ ಮಕ್ಕಳಿಗೆ ಪ್ರತಿಭಾಕಾರಂಜಿಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುದು ಮುಖ್ಯ, ಆ ಮೂಲಕ ತಮ್ ಪ್ರತಿಭೆಗಳನ್ನು ಗುರುತಿಸಿಕೊಳ್ಳಲು ಸಾಧ್ಯವೆಂದರು.
ವೇದಿಕೆ ಮೇಲೆ ಜಿಲ್ಲಾ ಪಂಚಾಯತಿಯ ಸದಸ್ಯರಾದ ರಾಮಣ್ಣ ಚೌಡ್ಕಿ, ನೌಕರರ ಸಂಘದ ಅಧ್ಯಕ್ಷರಾದನಾಗರಾಜ ಜುಮ್ಮಣ್ಣನವರ್, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಶಂಭುಲಿಂಗನದಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಶಿವಪ್ಪ ಜೋಗಿ, ತಾಲ್ಲೂಕು ಪಂಚಾಯತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಸ್ವಾಮಿ. ಶಿವಾನಂದ ಹೊದ್ಲೂರು. ಬಸವರಾಜ ಈಶ್ವರಗೌಡ್ರ ತಾಲ್ಲೂಕಾ ಅಧ್ಯಕ್ಷರಾದ ಸುರೇಶ ಅರಕೇರಿ, ಮಾರ್ತಾಂಡರಾವ್ ದೇಸಾಯಿ. ಪ್ರಾಣೇಶ ಪೂಜಾರ, ತಾಲ್ಲೂಕಾ ಪಧಾಧಿಕಾರಿಗಳು. ಉಪಸ್ಥಿತರಿದ್ದರು.

ಬಿ.ಇ.ಒ ಎಂ.ಜಿ ದಾಸರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕರಾದ ಶಂಕರಗೌಡ್ರ ಸ್ವಾಗತಿಸಿದರು. ಮಹೇಶ ಟಂಕಸಾಲಿ ವಂದಿಸಿದರು, ದ್ಯಾಮಣ್ಣ ಮುರುಡಿ ಹಾಗೂ ಪೂರ್ಣಿಮಾ ಸಿ,ಆರ್.ಪಿ ನಿರೂಪಿಸಿರು.

loading...