ಮಕ್ಕಳ ಆಸಕ್ತಿಯನುಸಾರ ಶಿಕ್ಷಣ ನೀಡಿ: ನಂದ್ಯಾಲ

0
21

ಸವಣೂರ: ಪ್ರತಿಯೊಬ್ಬರ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣ ಮಹತ್ವವನ್ನು ಹೊಂದಿದೆ. ಆದ್ದರಿಂದ, ಮಕ್ಕಳ ಆಸಕ್ತಿಯ ಅನುಸಾರ ಶಿಕ್ಷಣವನ್ನು ನೀಡಿದಲ್ಲಿ ಮಾತ್ರ ಉನ್ನತ ಗುರಿ ತಲುಪಲು ಸಾಧ್ಯವಾಗಲಿದೆ ಎಂದು ವ್ಯಕ್ತಿತ್ವ ವಿಕಸನ ಮತ್ತು ಶಿಕ್ಷಕರ ಪ್ರೆÃರಣಾ ತರಬೇತುದಾರ ಪ್ರೊ. ಬಿ.ಬಿ.ನಂದ್ಯಾಲ ತಿಳಿಸಿದರು.
ಪಟ್ಟಣದ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಿÃರ್ಣರಾದ ವಿದ್ಯಾರ್ಥಿಗಳಿಗಾಗಿ ಮುಂದಿನ ಶೈಕ್ಷಣಿಕ ಆಯ್ಕೆ ಕುರಿತು ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಂವಹನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಸಹ ಯಾವದೇ ಪ್ರಭಾವಕ್ಕೆ ಒಳಗಾಗಿ, ಒತ್ತಡ ಪೂರ್ವಕವಾಗಿ ಹಾಗೂ ಪಾಲಕರ ಪ್ರತಿಷ್ಠೆಗಾಗಿ ಎಸ್‌ಎಸ್‌ಎಲ್‌ಸಿ ನಂತರದ ಮುಂದಿನ ಶಿಕ್ಷಣವನ್ನು ಪಡೆಯಬಾರದು. ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಅತ್ಯಂತ ಮಹತ್ವ ಪಡೆದಿದೆ. ಆದ್ದರಿಂದ, ಮಕ್ಕಳ ಅಭಿರುಚಿಯನ್ನು ಅರಿತು ಪಾಲಕರು ಶಿಕ್ಷಣವನ್ನು ನೀಡಲು ಮುಂದಾಗಬೇಕು ಎಂದರು.
ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆತ್ಮ ವಿಶ್ವಾಸದಿಂದ ಶೈಕ್ಷಣಿಕ ಶಿಕ್ಷಣವನ್ನು ಪಡೆದು ಉನ್ನತ ಅಧ್ಯಯನದ ಮೂಲಕ ತಮ್ಮ ಗುರಿಯನ್ನು ತಲಪಬೇಕು ಎಂದರು.ಮೋಹನ ಮೆಣಸಿನಕಾಯಿ, ಡಾ. ಡಿ.ಎನ್.ಗುಂಜಳ, ಎಸ್.ಎಂ.ನೀರಲಗಿ, ಎ.ಎ. ಜಹಾಂಗೀರ್, ಪ್ರಭು ಹಲಗೇರಿ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.
ಪ್ರಭು ಅರಗೋಳ, ಎಸ್.ಡಿ.ದೇವಗಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.

loading...