ಮಕ್ಕಳ ಊಟಕ್ಕಾಗಿ ಬಿಕ್ಷೆ ಬೇಡಿದ ಶತಮಾನದ ಸಂತ ಸಿದ್ಧಗಂಗಾ ಶ್ರೀಗಳು

0
1

ಕನ್ನಡಮ್ಮ ಸುದ್ದಿ: ಬಸವನಬಾಗೇವಾಡಿ- ಮಕ್ಕಳ ಊಟಕ್ಕಾಗಿ ಹಣ ಕೊಡಿ ಎಂದು ಬಿಕ್ಷೆ ಬೇಡಿದವೆರು ಸಿದ್ಧಗಂಗಾ ಮಠದ ಲಿಂ. ಡಾ. ಶಿವಕುಮಾರ ಸ್ವಾಮಿಜಿಗಳು ಎಂದು ಆಲಮಟ್ಟಿ ನವೋದಯ ವಿದ್ಯಾಲಯದ ನಿವೃತ್ತ ಉಪ ಪ್ರಾಚಾರ್ಯ ಎಸ್‌.ಆರ್‌ ಅಂಗಡಿ ಹೇಳಿದರು.
ಅವರು ರವಿವಾರ ಪಟ್ಟಣದ ತಾಪಂ ಸಭಾ ಭವನದಲ್ಲಿ ಹಂಗರೆಗಿಯ ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಲಿಂ. ಡಾ. ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ನುಡಿ ನಮನ ಹಾಗೂ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸ್ವಾಮಿ ಹಾಗೂ ಸನ್ಯಾಸತ್ವಕ್ಕೆ ಸ್ವಾಮೀಜಿಗಳು ಹೆಸರುವಾಸಿಯಾಗಿದ್ದರು.ಮಕ್ಕಳ ಊಟಕ್ಕಾಗಿ ಬಿಕ್ಷೆ ಬೇಡಿದ ಶತಮಾನದ ಸಂತ. ಸರಕಾರದ ಬಳಿ ಬಿಡಿ ಕಾಸಿಗೆ ಕೈಚಾಚದೇ ಸಮಾಜದ ಸಹಕಾರದಿಂದ ಮಕ್ಕಳನ್ನೇ ದೇವರೆಂದು ಭಾವಿಸಿಕೊಂಡು ಶಿಕ್ಷಣ ಹಾಗೂ ಬಡತನಕ್ಕೆ ಹೆಚ್ಚಿನ ಮಹತ್ವ ನೀಡಿದವರು ಅವರಾಗಿದ್ದರು. ಹಳ್ಳಿಗಳ ಜನರಿಗೆ ಶಿಕ್ಷಣದ ಮಹತ್ವವನ್ನು ನೀಡಿದವರಲ್ಲಿ ಶ್ರೀಗಳು ಅಗ್ರಗಣ್ಯರಾಗಿದ್ದರು ಎಂದರು.
ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ ಬಸವರಾಜ ಮಾದನಶೆಟ್ಟಿ ಮಾತನಾಡಿ, ಶ್ರೀಮಠದಲ್ಲಿ ಮಕ್ಕಳಿಗೆ ಪಾಠದೊಂದಿಗೆ ಸಂಸ್ಕೃತ ಪಾಠವನ್ನು ಹೇಳಿ ಕೊಡುವ ರಾಜ್ಯದ ಏಕೈಕ ಮಠ ಸಿದ್ದಗಂಗಾ ಮಠ. ಮಠದಲ್ಲಿ ನಾನು ಮೂರು ವರ್ಷ ವಿದ್ಯಾರ್ಜನೆ ಮಾಡಿದ್ದು ಪೂರ್ವ ಜನ್ಮದ ಪುಣ್ಯವಾಗಿದೆ. ಶ್ರೀಗಳು ಮಕ್ಕಳ ಮೇಲಿಟ್ಟ ಪ್ರೀತಿಯನ್ನು ಹಾಗೂ ಅಲ್ಲಿಯ ಅನುಭವವನ್ನು ಹಂಚಿಕೊಂಡರು.
ದಲಿತ ಸಂಘರ್ಷ ಸಮಿತಿ ಮುಖಂಡ ಅಶೋಕ ಚಲವಾದಿ, ಆರ್‌.ಜಿ ಅಳ್ಳಗಿ, ಈರಣ್ಣ ಬಿರಾದಾರ, ಪ್ರೋ. ಯುವರಾಜ ಮಾದನಶೆಟ್ಟಿ ಸೇರಿದಂತೆ ಅನೇಕರು ಇದ್ದರು.

loading...