ಮಕ್ಕಳ ಬೌದ್ಧಿಕ ವಿಕಾಸಕ್ಕೆ ಶ್ರಮಿಸಿ: ಕಡಪಟ್ಟಿ

0
7

ಗುಳೇದಗುಡ್ಡ: ಮಕ್ಕಳಲ್ಲಿ ಬೌದ್ಧಿಕ ಮಟ್ಟ ಹೆಚ್ಚಿಸಲು ಅಂಗನವಾಡಿಗಳಲ್ಲಿ ಮಕ್ಕಳನ್ನು ನಿರಂತರ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಅಂಗನವಾಡಿಗಳಲ್ಲಿ ಕಾನ್ವೆಂಟ್ ಮಾದರಿ ಶಿಕ್ಷಣ ಸಿಗಬೇಕು. ಅದಕ್ಕೆ ಶಿಕ್ಷಕರು, ಪಾಲಕರು ಕೈಜೋಡಿಸಬೇಕು ಎಂದು ನಿವೃತ್ತ ಬ್ರಿಗೇಡಿಯರ್ ಎಂ.ಎನ್. ಕಡಪಟ್ಟಿ ಹೇಳಿದರು.
ಅವರು ಸಮೀಪದ ಕೋಟೆಕಲ್ಲ ಗ್ರಾಮದಲ್ಲಿ ಶಿಕ್ಷಣ ಹಾಗೂ ಪರಿಸರ ಅಭಿವೃದ್ಧಿ ಸಂಘದ ವತಿಯಿಂದ ಗುಳೇದಗುಡ್ಡ ಭಾಗದ ೧೧ ಹಳ್ಳಿಗಳ ೨೧ ಅಂಗನವಾಡಿಗಳಲ್ಲಿನ ೩೮೦ ಮಕ್ಕಳಿಗೆ ಆಂಗ್ಲ ಮಾಧ್ಯಮ ಮಾದರಿಯಲ್ಲಿ ಕನ್ನಡ ಮಾಧ್ಯಮದಲ್ಲಿರುವ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಅಕ್ಷರ ಕಲಿಸುವ ಪದ್ಧತಿ, ರೀತಿಯನ್ನು ಹೇಳಿ ಕೊಡುವ ಕಾರ್ಯಗಾರಗಳನ್ನು ನಡೆಸಲಾಗುತ್ತದೆ. ಶಿಕ್ಷಕರು ಅದರ ಲಾಭ ಪಡೆದು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸತತ ಶ್ರಮ ವಹಿಸಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಅಂಗನವಾಡಿಗಳಲ್ಲಿ ಕಲಿಕಾ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆಗಳು ನಡೆಯಬೇಕು. ಮಕ್ಕಳ ಬೌದ್ಧಿಕ ಬೆಳವಣಿಗೆ ಇಲ್ಲಿಂದಲೇ ಪ್ರಾರಂಭಗೊಳ್ಳಬೇಕು ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಶೋಕ ಬಸಣ್ಣವರ, ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಡಾ.ಎಚ್.ಎಸ್.ಕುಕನೂರ ಮಾತನಾಡಿದರು.
ಜಿ.ಎಸ್. ದೇಸಾಯಿ, ಗ್ರಾಪಂ ಅಧ್ಯಕ್ಷೆ ಲಕ್ಷಿö್ಮÃಬಾಯಿ ಸೀತಿಮನಿ, ಗ್ರಾಪಂ ಸದಸ್ಯರಾದ ಉಮಾದೇವಿ ತಳವಾರ, ನೀಲಾಭಾಯಿ ಮಳಗಾವಿ, ಹುಚ್ಚೆÃಶ ಪೂಜಾರಿ, ಹುಚ್ಚೆÃಶ ಕಡಪಟ್ಟಿ, ಕೋಟೆಕಲ್ಲ ಸರ್ಕಾರಿ ಶಾಲೆಯ ಮುಖ್ಯಗುರು ಟಿ.ಎನ್.ಕಂಕನೋಡಿ, ಅಂಗನವಾಡಿ ಮೇಲ್ವಿಚಾರಕಿ ಸುಮಾ ಮಳ್ಳಿ, ಮಹಮದ್ ಅತ್ತಾರ, ಈರಪ್ಪ ಅಬಕಾರಿ, ಅಂಗವಾಡಿ ಕಾರ್ಯಕರ್ತರು, ಮತ್ತಿತರರು ಇದ್ದರು.

loading...