ಮಗನ ನಿಗೂಢ ಸಾವು-ತಾಯಿಗೆ ಸಂಶಯದ ಛಾಯೆ : ಠಾಣಿಗೆ ದೂರು

0
7

ಹುನಗುಂದ: ತಾಲೂಕಿನ ಸಮೀಪದ ಅಮರಾವತಿ ಗ್ರಾಮದಲ್ಲಿ ಕಳೆದ ಮಂಗಳವಾರ ರಾತ್ರಿ ವ್ಯಕ್ತಿಯೊರ್ವನು ಮೃತಪಟ್ಟಿದ್ದು.ಮೃತನ ತಾಯಿ ಕಾಂತಮ್ಮ ಸಂಗಪ್ಪ ಭೋವಿ ನನ್ನ ಮಗನ ಸಾವಿನಲ್ಲಿ ಸಂಶಯವಿದೆ ಇದನ್ನು ಸಂಪೂರ್ಣ ತನಿಖೆ ಮಾಡಬೇಕು ಎಂದು ಹುನಗುಂದ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದರಿಂದ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಮೃತ ಸುಭಾಸ ಸಂಗಪ್ಪ ಭೋವಿ (೩೫) ತಾಯಿ,ಪತ್ನಿ ಹಾಗೂ ಮೂರು ಜನ ಮಕ್ಕಳೊಂದಿಗೆ ಅಮರಾವತಿ ಗ್ರಾಮದ ತಮ್ಮ ಸ್ವಂತ ಮನೆಯಲ್ಲಿ ವಾಸವಿದ್ದ.ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ತಾಯಿ ಕಾಂತಮ್ಮ ಮನೆಯ ಮಾಳಿಗೆ ಮೇಲೆ ಮಲಗಿದ್ದರೆ.

ಸುಭಾಸ ಪತ್ನಿ ಮಕ್ಕಳೊಂದಿಗೆ ಮನೆಯ ಒಳಗಡೆ ಮಲಗಿದ್ದ. ರಾತ್ರಿ ೧೦ ಗಂಟೆಯಿಂದ ಮರದಿನ ನಸುಕಿನ ೬ ಗಂಟೆಯ ಮಧ್ಯೆದಲ್ಲಿ ಸುಭಾಸ ಏಕಾಏಕಿಯಾಗಿ ನಿಗೂಢ ಸಾವನ್ನಪ್ಪಿದ್ದು.ಶವವನ್ನು ನೋಡಲಾಗಿ ಅವನ ಕುತ್ತಿಗೆ, ಎಡಗಡೆಯ ಹೊಟ್ಟೆಯ ಸೇರಿದಂತೆ ಅಲ್ಲಲ್ಲಿ ಚೂರಿದ ಗಾಯಗಳನ್ನು ನೋಡಿದ ತಾಯಿ ಕಾಂತಮ್ಮ ಇದು ಸಹಜ ಸಾವಲ್ಲ ಇದರಲ್ಲಿ ಏನೋ ನಡೆದಿದೆ ಎಂದು ಸಂಶಯ ವ್ಯಕ್ತಿಪಡಿಸಿ ಪೊಲೀಸ್‌ರಿಗೆ ದೂರ ನೀಡಿದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಎಸ್.ಬಿ.ಗಿರೀಶ, ಸಿಪಿಐ ಸಂಜೀವ ಬಳಿಗಾರ, ಪಿಎಸ್‌ಐ ಪುಂಡಲೀಕ ಪಟಾತರ ಸ್ಥಳಕ್ಕೆ ಭೇಟಿ ನೀಡಿ ಶವದ ಮರಣೋತ್ತರ ಪರೀಕ್ಷೆಯ ಮುಂಚಿತವಾಗಿ ತಜ್ಞ ವೈದ್ಯರಿಂದ ಮೃತನ ದೇಹ ಮೇಲಿನ ಕಲೆಗಳನ್ನು ಮತ್ತು ಮೃತ ಮಲಗಿಕೊಂಡ ಕೋಣಿ ಸೇರಿದಂತೆ ಸಂಪೂರ್ಣ ಮನೆಯನ್ನು ಪರಿಶೀಲಿಸಿದರು.ನಂತರ ಮೃತನ ತಾಯಿ ಕೊಟ್ಟ ದೂರಿನ ಮೇರಿಗೆ ಪೊಲೀಸ್‌ರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ.

loading...