ಮಗಳ ಔಷಧಿ ತರಲು ಹೋದ ತಂದೆ ಮಸಣಕ್ಕೆ

0
18

 

ಬೆಳಗಾವಿ:3 ಕ್ಯಾನ್ಸರ್ ರೋಗದಿಂದ ನರಳುತ್ತಿರುವ ಮಗಳಿಗೆ ಔಷಧಿ ತರಲು ನೇಸರಗಿಯಿಂದ ದೇಸನೂರ ಮಾರ್ಗವಾಗಿ ಸಾಗಿದ್ದ ತಂದೆಯೋರ್ವ ಸಮೀಪದ ಆರ್‍ಟಿಎ ಹನಮನಟ್ಟಿ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ 10:30ರ ಸುಮಾರಿಗೆ ಸಂಭವಿಸಿದೆ.

ಮೃತ ತಂದೆಯನ್ನು ನೇಸರಗಿ ಗ್ರಾಮದ ಚಂದ್ರಕಾಂತ ದೇವಪ್ಪ ಕೌಸಾಳ (40) ಎಂದು ಗುರುತಿಸಲಾಗಿದೆ. ಮಗಳನ್ನು ಹೇಗಾದರೂ ಮಾಡಿ ಆರೈಕೆ ಮಾಡಬೇಕೆನ್ನುವ ಹಂಬಲದಲ್ಲಿದ್ದ ತಂದೆ ಚಂದ್ರಕಾಂತ ವೈದ್ಯರು ಬರೆದುಕೊಟ್ಟ ಚೀಟಿಯೊಂದಿಗೆ ತೆರಳಿ ಔಷಧಿ ಸಮೇತ ಲೂನಾ ಮೇಲೆ ಸಾಗಿದ್ದ ಸಂದರ್ಭದಲ್ಲಿ 407 ವಾಹನವೊಂದು ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಕಾಂತ ಕೌಸಾಳ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ತರುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದರು.

ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ತನಿಖೆ ಮುಂದುವರೆದಿದೆ.

loading...

LEAVE A REPLY

Please enter your comment!
Please enter your name here