ಮಣ್ಮುಖ ಹಾವು ಸಾಗಾಟ ಮಾಡುತ್ತಿದ್ದವರ ಬಂಧನ

0
44

 

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಎರಡು ತಲೆಯ ಮಣ್ಮುಖ ಹಾವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂದಿಸಿದ್ದು, ಇಬ್ಬರು ಆರೋಪಿಗಳು ಪರಾರಿಯಾದ ಘಟನೆ ಶನಿವಾರ ಸಂಜೆ ನಡೆದಿದೆ.
ಸಮೀಪದ ಇಂಜನವಾರಿ ಗ್ರಾಮದ ಸೇತುವೆ ಬಳಿ ಪಿಎಸ್‍ಆಯ್ ಗಣಪತಿ ಕೊಂಗನಹಳ್ಳಿ ನೇತೃತ್ವದ ತಂಡ ದಾಳಿ ಮಾಡಿದಾಗ ಬಾದಾಮಿ ತಾಲೂಕಿನ ಹನಮನೇರಿ ಗ್ರಾಮದ ವೆಂಕಪ್ಪ ಸಂಶಿ, ಅಶೋಕ ರಾಮಪ್ಪ ಸಂಶಿ, ಹಲಕುರ್ಕಿ ಗ್ರಾಮದ ಸದಾಶಿವ ಹಿರೇಮಠ ಅವರನ್ನು ಬಂಧಿಸಿ, ಮೂರು ಮಣ್ಮುಖ ಹಾವುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಾದ ಶಿರೂರು ಗ್ರಾಮದ ಶಿವು ದಂಡಿನ, ಕಲಾದಗಿಯ ಮಹಾಂತೇಶ ಅಂಗಡಿ ಪರಾರಿಯಾಗಿದ್ದಾರೆ.

ನಿಧಿ ಆಸೆಗಾಗಿ ಆರೋಪಿಗಳು ಎರಡು ತಲೆಯ ಹಾವುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರೆನ್ನಲಾಗಿದ್ದು, ಸಮೀಪದ ಬೂದನಗಡ ಗುಡ್ಡದಿಂದ ಈ ಹಾವುಗಳನ್ನು ಹಿಡಿದು ತಂದಿದ್ದರು.
ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

loading...