ಮತದಾನ ಮಾಡಿದವನೇ ಮಹಾಶೂರ ಜಾಗೃತಿಗೆ ಚಾಲನೆ

0
112

ಹುನಗುಂದ: ಪ್ರಜಾಪ್ರಭುತ್ವದಲ್ಲಿ ಮತದಾನ ಅಮೂಲ್ಯವಾದುದು. ಈ ರಾಷ್ಟçದ ಭವಿಷ್ಯ ಮತದಾರರ ಮತ ಹಾಕುವುದರ ಮೇಲೆ ನಿಂತಿದೆ. ಮತದಾನ ಮಾಡಿದವನೇ ಮಹಾಶೂರ ಎಂದು ಬಾಗಲಕೋಟ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಅವರು ಪಟ್ಟಣದ ತಾಲೂಕ ಪಂಚಾಯತ ಆವರಣದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವಿÃಪ್ ಸಮಿತಿ ವತಿಯಿಂದ ಲೋಕಸಭೆಯ ಚುನಾವಣಿಯ ಮತ ಪ್ರಮಾಣ ಹೆಚ್ಚಿಸಲು ಹಮ್ಮಿಕೊಳ್ಳಲಾಗಿದ್ದ ಮತದಾನ ಮಾಡಿದವನೇ ಮಹಾಶೂರ ಎಂಬ ಮತದಾನ ಜಾಗೃತಿಯ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡುತ್ತ ದೇಶದಲ್ಲಿ ಉತ್ತಮ ಪ್ರಜಾ ವ್ಯವಸ್ಥೆಯನ್ನು ನಿರ್ಮಾಸುವ ಶಕ್ತಿ ಮತದಾರ ಪ್ರಭುಗಳ ಮತಗಳಲ್ಲಿ ಅಡಗಿದೆ.ಯಾವದೇ ಪಕ್ಷಗಳ ಆಸೆ ಆಮೀಷೆಗಳಿಗೆ ಮನಸೋತು ಹಣ ಹೆಂಡಕ್ಕಾಗಿ ಮತವನ್ನು ಮಾರಿಕೊಳ್ಳುವುದು ದೇಶ ದ್ರೊÃಹದ ಕೆಲಸವಾಗಿದೆ. ಮತ ಎನ್ನುವುದು ಒಂದು ಹೆಣ್ಣುಮಗಳು ಇದ್ದಂತೆ. ನೀವು ಮುದ್ದಿನಿಂದ ಸಾಕಿದ ಹೆಣ್ಣುಮಗಳನ್ನು ಯೋಗ್ಯ ವರವನ್ನು ನೋಡಿ ಹೇಗೆ ಮದುವೆ ಮಾಡಿಕೊಡುತ್ತಿರೋ ಹಾಗೆ ಸಂವಿಧಾನ ನೀಡಿದ ಅಮೂಲ್ಯವಾದ ಮತವನ್ನು ಯೋಗ್ಯ ವ್ಯಕ್ತಿಗಳಿಗೆ ಮತ ಹಾಕಿ ಮತದ ಮೌಲ್ಯವನ್ನು ಹೆಚ್ಚಿಸಬೇಕು. ತಾಲೂಕಿನಲ್ಲಿ ಒಂದು ಸಖಿ ಎನ್ನುವ ಮತಗಟ್ಟಿಯನ್ನು ತೆರೆಯಲಾಗಿದೆ. ಹುನಗುಂದ ಕೇಂದ್ರ ಶಾಲೆ ಮತ್ತು ಇಲಕಲ್ಲದ ಸರ್ಕಾರಿ ಉರ್ದು ಶಾಲೆಯಲ್ಲಿನ ಮತ ಕೇಂದ್ರದಲ್ಲಿ ಬರುವ ಎಲ್ಲ ಮತದಾರರ ಮನೆಗಳಿಗೆ ಪತ್ರ ಬರೆಯಲಾಗಿದ್ದು ಮತ್ತು ಮನೆ ಮನೆಗಳಿಗೆ ತರಳಿ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿಯನ್ನು ಕೂಡಾ ಮಾಡಲಾಗಿದೆ. ಈ ಬಾರಿ ನೂರಕ್ಕೆ ನೂರರಷ್ಟು ಮತದಾನ ಮಾಡಲು ಕರೆ ನೀಡಿದರು. ಈ ಸಂದರ್ಭದಲ್ಲಿ ಸ್ವತಃ ಸಿಎಸ್ ಗಂಗೂಬಾಯಿ ಮಾನಕರ ಬೈಕ್ ಹತ್ತಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಮಾಡಿದವನೇ ಮಹಾಶೂರ ಎಂದು ಮತ ಜಾಗೃತಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಪುಷ್ಪಾ ಕಮ್ಮಾರ, ತಾಲೂಕ ಆರೋಗ್ಯ ಅಧಿಕಾರಿ ಡಾ.ಕುಸುಮಾ ಮಾಗಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಶೈರಾಭಾನು ನದಾಫ್, ಹಿಂದುವಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಹಾದೇವಿ ಗದ್ದಿ, ಮುರಳೀಧರ ದೇಶಪಾಂಡೆ, ಎನ್‌ಪಿಎಸ್ ನೌಕರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾ.ಪಂ ಪಿಡಿಒಗಳು ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದರು.

loading...