ಮತಾಂತರ ಆರೋಪ: ಶ್ರೀರಾಮ ಸೇನೆ ದಾಳಿ

0
28

ಬೆಳಗಾವಿ,20-ಕಳೆದ ಮೂರು ತಿಂಗಳಿಂದ ನಗರದ ಟಿಳಕವಾಡಿಯ ಕಲಾ ಮಂದಿರದಲ್ಲಿ ಪ್ರತಿ ರವಿವಾರ

ಪರವಾನಿಗೆ ಇಲ್ಲದೆ ಕ್ರಿಶ್ಚಿಯನ್ ಮಿಶನರಿಯೊಂದು ಮತಾಂತರಕ್ಕೆ ತೊಡಗಿದೆ ಎಂದು ಆರೋಪಿಸಿ ರವಿವಾರ

ಮಧ್ಯಾಹ್ನ 12ರ ಸಮಾರಿಗೆ ಶ್ರೀರಾಮ ಸೇನೆ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿಯಿಟ್ಟು

ಇಂಥ ಕಾರ್ಯಕ್ರಮ ರದ್ದುಗೊಳಿಸಬೇಕು, ಆಯೋಜಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮತಾಂತರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ತೀವ್ರ ಆಕ್ರೌಶ ವ್ಯಕ್ತಪಡಿಸಿ, ಆಯೋಜಕರನ್ನು

ಪರವಾನಿಗೆ ಪತ್ರ ಕೇಳಿದಾಗ ಅವರಿಂದ ನಿರಾಕರಣೆಯ ಉತ್ತರ ಬಂದಿತು. ಈ ಸಂದರ್ಭದಲ್ಲಿ ಗೊಂದಲ

ಏರ್ಪಟ್ಟಾಗ ಟಿಳಕವಾಡಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.

ಶ್ರೀರಾಮ ಸೇನೆಯ ರಮಾಕಾಂತ ಕುಂಡುಸ್ಕರ, ನಗರ ಸೇವಕ ದೀಪಕ ಜಮಖಂಡಿ ಹಾಗೂ ಕಾರ್ಯಕರ್ತರ

ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪಾಲಿಕೆಯ ಒಡೆತನದ ಕಲಾ ಮಂದಿರವನ್ನು ಕ್ರಿಶ್ಚಿಯನ್

ಮಿಶನರಿಗಾಗಿ ಒಂದು ವರ್ಷ ಬಾಡಿಗೆ ನೀಡಲಾಗಿದೆ. ಮತಾಂತರಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ

ಅನುಮತಿ ಕೊಟ್ಟವರ್ಯಾರು. ತಕ್ಷಣ ಕ್ರಮ ಜರುಗಿಸಬೇಕೆಂದು ಶ್ರೀರಾಮ ಸೇನೆ ಒತ್ತಾಯಿಸಿತು. ಈ ಕುರಿತು

ಟಿಳಕವಾಡಿ ಪೊಲೀಸ ಠಾಣೆಯಲ್ಲಿ ಶ್ರೀರಾಮ ಸೇನೆ ದೂರು ದಾಖಲಿಸಿದೆ.

loading...

LEAVE A REPLY

Please enter your comment!
Please enter your name here