ಮತ್ತೊಂದು ಅಪಘಾತ: ಬೈಕ್ ಸವಾರ ಸ್ಥಳದಲ್ಲೆ ಸಾವು

0
27

ಮತ್ತೊಂದು ಅಪಘಾತ: ಬೈಕ್ ಸವಾರ ಸ್ಥಳದಲ್ಲೆ ಸಾವು
ಬೆಳಗಾವಿ: ಬೈಲಹೊಂಗಲ ರಾಜ್ಯ ಹೆದ್ದಾರಿಯಲ್ಲಿ ಕಾರು-ಬೈಕ್ ಮುಖಾಮುಖಿಯಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ.
ಸಂಪಗಾವ ವ್ಯಾಪ್ತಿಯ ತಿಗಡಿ ಗ್ರಾಮದ ಶಿವಶಂಕರ ಮಾರುತಿ ಮುದ್ದನ್ನವರ(೨೫) ಮೃತ ದುರ್ದೈವಿ, ಭೀಮರಾಯಪ್ಪ ಮಹಾಬಳೇಶ್ವರ ಬೆಳವಡಿ, ಉಳವೇಶ ಬಡಿಗೇರ ಇಬ್ಬರಿಗೆ ವ್ಯಕ್ತಿಗಳಿ ಗಾಯಗಳಾಗಿವೆ.
ಮದುವೆ ಸಾಮಗ್ರಿ ಖರೀದಿಗಾಗಿ ಬೈಲಹೊಂಗಲದಿAದ ಬೆಳಗಾವಿಗೆ ಆಗಮಿಸುತ್ತಿದ್ದ ಇರ್ಪಾನ, ಗೆಳೆಯರ ಕಾರ ಚಾಲಕನ ನಿಯಂತ್ರಣ ತಪ್ಪಿ ಸಂಪಗಾವ ಬಳಿಯಲ್ಲಿ ಬೈಕ್ ಸವಾರರಿಗೆ ಆಘಾತ ಸಂಭವಿಸಿದೆ.
ಈ ಏಟಿನಲ್ಲಿ ಬೈಕ್ ಸವಾರನ ಪ್ರಾಣ ಪಕ್ಷಿ ಹಾರಿಹೋಗಿದೆ ಜತೆಯಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ. ಮತ್ತು ಕಾರಿನ ಇರ್ಪಾನ ಮಹ್ಮದಹುಸೇನ ತಿಗಡಿ, ಮಾಹಬೂಬಿ ಮಹ್ಮದಹುಸೇನ್ ತಿಗಡಿ ಇಬ್ಬರಿಗೂ ಗಾಯಗಳಾಗಿವೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

loading...