ಮತ ಎಣಿಕೆಗೆ ಕ್ಷಣಗಣನೆ: ನಾಳೆ ಫಲಿತಾಂಶ ಪ್ರಕಟ

0
4

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಚುನಾವಣೆಗೆ ಕಳೆದ ಏಪ್ರಿÃಲ್ ೨೩ ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ ೨೩ ರಂದು ನಡೆಯಲಿದ್ದು, ಅದಕ್ಕಾಗಿ ತೋಟಗಾರಿಕೆ ವಿವಿಯಲ್ಲಿ ಸ್ಥಾಪಿಸಲಾದ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೆÃಶಿಸಿ ಮಾತನಾಡಿದ ಅವರು ಪ್ರತಿ ಬಾರಿಗಿಂತ ಈ ಬಾರಿ ಮತ ಎಣಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಫಲಿತಾಂಶ ಪ್ರತಿ ಬಾರಿಗಿಂತ ೩-೪ ಗಂಟೆವಾಗಲಿದೆ ಎಂದರು. ಬಾಗಲಕೋಟೆ ಲೋಕಸಭಾ ಮತಕ್ಷೆÃತ್ರಕ್ಕೆ ಒಟ್ಟು ೮ ವಿಧಾನಸಭಾ ಕ್ಷೆÃತ್ರಗಳನ್ನು ಒಳಗೊಂಡಿದೆ. ಪ್ರತಿ ಮತಕ್ಷೆÃತ್ರಕ್ಕೆ ತಲಾ ಒಂದು ಕೊಠಡಿ ನಿಯೋಜಿಸಲಾಗಿದ್ದು, ೧೪ ಟೇಬಲ್ ಅಳಡಿಸಲಾಗಿದೆ ಎಂದು ತಿಳಿಸಿದು.
ತೋವಿವಿಯಲ್ಲಿ ಮತ ಎಣಿಕೆ ಕೊಠಡಿ ಬಗ್ಗೆ ವಿವರಿಸದ ಅವರು ನೆಲಮಹಡಿಯಲ್ಲಿ ಮುಧೋಳ, ಬೀಳಗಿ, ಬಾದಾಮಿ ಹಾಗೂ ನರಗುಂದ ಮಕ್ಷೆÃತ್ರಗಳ ಕೊಠಡಿಗಳಿದ್ದರೆ, ಮೊದಲನೇ ಮಹಡಿಯಲ್ಲಿ ತೇರದಾಳ, ಜಮಖಂಡಿ, ಬಾಗಲಕೋಟೆ ಹಾಗೂ ಹುನಗುಂದ ಮತಕ್ಷೆÃತ್ರದ ಎಣಿಕೆ ಕೊಠಡಿಗಳಿವೆ. ಈ ಎಣಿಕೆ ಕಾರ್ಯಕ್ಕೆ ಮತಕ್ಷೆÃತ್ರವಾರು ಅಳವಡಿಸಲಾದ ೧೪ ಟೇಬಲ್‌ಗಳಲ್ಲಿ ಪ್ರತಿ ಟೇಬಲ್‌ಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಸಹಾಯಕ ಹಾಗೂ ಒಬ್ಬ ಮೈಕ್ರೊÃ ವಿಕ್ಷಕ ಸೇರಿದಂತೆ ೩ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಅಂಚೆ ಮತಪತ್ರಗಳ ಟೇಬಲ್‌ಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ, ಒಬ್ಬ ಎಣಿಕೆ ಮೇಲ್ವಿಚಾರಕ, ಇಬ್ಬರು ಎಣಿಕೆ ಸಹಾಯಕರು ಹಾಗೂ ಒಬ್ಬ ಮೈಕ್ರೊÃ ವೀಕ್ಷಕ ಸೇರಿದಂತೆ ಒಟ್ಟು ೫ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಮತ ಎಣಿಕೆ ಕಾರ್ಯ ದಿನಚುನಾವಣಾ ಅಭ್ಯರ್ಥಿಗಳು, ಎಜೆಂಟರುಗಳು ಬೆಳಿಗ್ಗೆ ೬ ಗಂಟೆಯೊಳಗೆ ಎಣಿಕೆ ಕೇಂದ್ರಕ್ಕೆ ಬರಬೇಕು. ಬೆ.೭.೩೦ಕ್ಕೆ ಸ್ಟಾಂಗ್ ರೂಮಗಳನ್ನು ತೆರೆಯಲಾಗುತ್ತಿದ್ದು, ೮ ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ಪ್ರಾರಂಭವಾಗುವುದು. ೮.೩೦ಕ್ಕೆ ಮತಯಂತ್ರಗಳ ಎಣಿಕೆ ಕಾರ್ಯ ಪ್ರಾರಂಭವಾಗುವುದೆಂದರು. ಚುನಾವಣಾ ಆಯೋಗದ ನಿರ್ದೇಶನದಂತೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ಮುಗಿದು ಎರಡು ಸುತ್ತಿನ ಮತಯಂತ್ರಗಳ ಎಣಿಕೆಯನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿತ್ತು, ಆದರೆ ಆಯೋಗ ಇತ್ತಿÃಚಿನ ನಿರ್ದೇಶನದಂತೆ ಅಂಚೆ ಮತಪತ್ರಗಳ ಎಣಿಕೆ ಮುಗಿಯುವವರೆಗೆ ಮತಯಂತ್ರಗಳ ಎಣಿಕೆಯನ್ನು ಸ್ಥಗಿತಗೊಳಿಸದೇ ಪೂರ್ಣಗೊಳಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಶಶಿಕುಮಾರ ಕುರೇರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

loading...