ಮದ್ಯ ನಿಷೇಧಕ್ಕಾಗಿ ಬಹಿರಂಗ ನೋಟಾ ಅಭಿಯಾನ

0
3
 

ಮುಂಡಗೋಡ: ಮದ್ಯ ನಿಷೇಧ ಆಂದೋಲನ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಮದ್ಯ ನಿಷೇಧಕ್ಕಾಗಿ ಬಹಿರಂಗ ನೋಟಾ ಅಭಿಯಾನ ನಡೆಸಲಾಗುವುದು ಎಂದು ಸಂಘಟನೆಯ ಸದಸ್ಯೆ ನಿಂಗಮ್ಮ ಸವಣೂರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಂವಿದಾನ ರಕ್ಷಣೆಯ ಪ್ರಮಾಣ ಮಾಡಿರುವ ರಾಜಕೀಯ ಪಕ್ಷಗಳು 47ನೇ ಪರಿಚ್ಛೇದದಲ್ಲಿ ಹೇಳಿದಂತ್ತೆ ಮದ್ಯ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು, ಈ ವಿಚಾರವಾಗಿ ನಮ್ಮ ಸಂಘಟನೆ ಮತ್ತು ಮಹಿಳಾ ಸ್ವಸಹಾಯಕ ಸಂಘಗಳು, ಹಾಗೂ ಹಲವಾರು ಸಂಘಟನೆಗಳು ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿವೆ. ಮದ್ಯ ನಿಷೇಧಕ್ಕೆ ಆಗ್ರಹಿಸಿ 2019ರ ಜನವರಿ 19 ರಿಂದ 30ರವರೆಗೆ ಚಿತ್ರದುರ್ಗದಿಂದ ಬೆಂಗಳೂರವರೆಗೆ ಮೂರು ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾದಯಾತ್ರೆ ಮೂಲಕ ಹೋರಾಟ ಮಾಡಲಾಗಿದೆ. ಆದರೆ ಸರ್ಕಾರಗಳು ಹೋರಾಟವನ್ನು ನಿರ್ಲಕ್ಷಿಸಿದಲ್ಲದೆ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಹಿಂಸೆಗಳ ಬಗ್ಗೆ ತುಂಬಾ ನಿರ್ಲಕ್ಷ ಮನೋಭಾವನೆ ಹೊಂದಿರುವ ಅವರು ಮಹಿಳೆಯರ ನೂಂವಿಗೆ ಸ್ಪಂದಿಸುತ್ತಿಲ್ಲ, ಮಹಿಳೆಯರ ಗೌರವದ ಕುರಿತು ಸಭೆ ಸಮಾರಂಭಗಳ ಬಾಷಣದಲ್ಲಿ ಹೇಳುವ ರಾಜಕೀಯ ಪಕ್ಷಗಳ ಮುಖಂಡರು, ಮದ್ಯಪಾನದಿಂದಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಮಾತ್ರ ಮುಂದಾಗುತ್ತಿಲ್ಲ. ಮದ್ಯ ಮಾರಾಟದಿಂದ ಬರುವ ಆದಾಯ ಮಾತ್ರ ಸರ್ಕಾರದ ಕಣ್ಣಿಗೆ ಕಾಣುತ್ತದೆ. ಆದರೆ, ಅದರಿಂದ ಹಾಳಾಗುತ್ತಿರುವ ಕುಟುಂಬಗಳ ಜೀವನದ ಪಾಡು ಇವರಿಗೆ ತಿಳಿಯುತ್ತಿಲ್ಲ, ಹಾಗಾಗಿ ಲೋಕಸಭೆಯ ಚುನಾವಣೆಯ ದಿನ ಶಾಂತಿಯುತ ಸತ್ಯಾಗ್ರಹದೊಂದಿಗೆ ಬಹಿರಂಗ ನೋಟಾ ಅಭಿಯಾನಕ್ಕೆ ಬೆಂಬಲ ನೀಡಬೇಕು. ಮುಂದಿನ ತಿಂಗಳು ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ, ಹಾಗೂ ಪ್ರಮುಖರಿಗೆ ಮದ್ಯ ನಿಷೇಧ ಮಾಡುವಂತ್ತೆ ಸಾಮೂಹಿಕವಾಗಿ ಪತ್ರಗಳನ್ನು ಬರೆದು ಸಮಾಜದ ಆರೋಗ್ಯ, ಮಹಿಳೆಯರ ಬದುಕು ಹಸನು ಮಾಡುವ ಕುರಿತು ಅವರನ್ನು ಎಚ್ಚರಿರುವ ಕೆಲಸವಾಗಬೇಕಿದೆ.
ಆ ನಿಟ್ಟಿನಲ್ಲಿ ನಮ್ಮ ಮದ್ಯ ನಿಷೇಧ ಆದೋಲನ ಸಂಘಟನೆ ಈಗ ಮದ್ಯ ನಿಷೇಧಕ್ಕಾಗಿ ಬಹಿರಂಗ ನೋಟಾ ಅಭಿಯಾನಕ್ಕೆ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೆವೆ. ಹಾಗಾಗಿ ಮದ್ಯ ನಿಷೇಧದ ಪರವಾಗಿರುವವರೆಲ್ಲರೂ ಈ ಅಭಿಯಾನದಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದ್ದಾರೆ.

loading...