ಮನುಷ್ಯನ ಜೀವನದಲ್ಲಿ ಸಂಗೀತ ಅತೀ ಮಹತ್ವ

0
422

ಬೆಳಗಾವಿ 16: ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಸಂಗೀತ ಅತೀ ಮಹತ್ವದ್ದಾಗಿದ್ದು, ಸಂಗೀತದಿಂದ  ಮಾತ್ರ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ನಿವೃತ್ತ ನ್ಯಾಯಾಧೀಶ ಹಾಗೂ ಭರತೇಶ ಎಜ್ಯುಕೇಶನ ಟ್ರಸ್ಟ ಉಪಾಧ್ಯಕ್ಷ ಜಿನದತ್ತ ದೇಸಾಯಿ ಅವರು ಅಭಿಪ್ರಾಯ ಪಟ್ಟರು.

ಶನಿವಾರದಂದು ಭರತೇಶ ಎಜ್ಯುಖೇಶನ ಟ್ರಸ್ಟ ಸಂಸ್ಥೆಯಲ್ಲಿ ಜಿನವಾಣಿ ಸಂಗೀತ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತದಿಂದ ಮನುಷ್ಯನ  ಜೀವನದಲ್ಲಿ ಉತ್ತಮ ವಾತಾವರಣ ಉಂಟಾಗಿ ಒಳ್ಳೆಯ ಸಂಸ್ಕಾರಗಳು ಹುಟ್ಟಿಕೊಳ್ಳುತ್ತವೆ. ಅದಲ್ಲದೇ ಸಂಗೀತ ಆಲಿಸುವುದರಿಂದ ಉತ್ತಮ ಆರೋಗ್ಯವನ್ನು ಸಹ ಹೊಂದಬಹುದಾಗಿದೆ ಎಂದು ಅವರು ಹೇಳಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಟ್ರಸ್ಟ ಕಾರ್ಯದರ್ಶಿ ರಾಜೀವ ದೊಡ್ಡಣವರ ಅವರು ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸಂಗೀತ ಕಲಿಸಬೇಕೆಂದು ಸಂಸ್ಥೆಯ ಬಹುದಿನಗಳ ಉದ್ದೇಶ ಇಂದು ಈಡೇರಿಸಿದಂತಾಗಿದೆ.  ಚಿಕ್ಕ ಮಕ್ಕಳಿಗೆ ಸಂಗೀತ ಕಲಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ. ಮಕ್ಕಳು ಸಹ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಂಗೀತ ಕಲಿಯುವುದ ರಿಂದ ವಿದ್ಯಾಭ್ಯಾಸಕ್ಕೆ ಸಹಾಯ ವಾಗಲಿದೆ  ಎಂದು ಅವರು ಅಭಿಪ್ರಾಯ ಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು  ಭರತೇಶ ಇಂಗ್ಲೀಷ  ಮಾದ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಉಪಾಧ್ಯೆ ಅವರು ವಹಿಸಿದ್ದರು.  ಟ್ರಸ್ಟ ಆಡಳಿತ ಮಂಡಳಿಯ ಸದಸ್ಯರಾದ ವಿನೋದ ದೊಡ್ಡಣವರ, ಶ್ರೀಪಾಲ ಖೆಮಲಾಪೂರೆ, ನೇತ್ರಾ ಜೋಶಿ  ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಭರತೇಶ ಇಂಗ್ಲೀಷ ಮಾಧ್ಯಮ ಶಾಲೆಯ ಪ್ರಾಚಾರ್ಯ ರೇಣುಕಾ ಪಾಟೀಲ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ರಾಬರ್ಟ ಫರ್ನಾಂಡಿಸ ವಂದಿಸಿದರು. ಶಿಕ್ಷಕಿ ತಹಶೀಲ್ದಾರ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ನೇತ್ರಾ ಜೋಶಿ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು

loading...

LEAVE A REPLY

Please enter your comment!
Please enter your name here