ಮನುಷ್ಯ ಆಕಾರವಿದ್ದರೆ ಸಾಲದು ಅವನಲ್ಲಿ ಮಾನವೀಯತೆ ಇರಬೇಕು: ಶ್ರೀಗಳು

0
61

ರಾಮದುರ್ಗ : ಹಣವನ್ನು ಎಲ್ಲರೂ ಗಳಿಸಬಹುದು ಆದರೆ ಜನರನ್ನು ಗಳಿಸವುದು ಅಸಾಧ್ಯ, ರಾಜಕೀಯ ರಂಗದಲ್ಲಿರುವ ರಾಜಕಾರಣಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ ನಿತ್ಯ ವಿಲಾಸಿ ಜೀವನ ನಡೆಸಿ ಇಂದು ಅವರ ಸ್ಥಿತಿಯೇನಾಗಿದೆ ಎಂಬುದು ಎಲ್ಲರಿಗೋ ತಿಳಿದ ವಿಷಯ ಇದ್ದಾಗ ಸ್ವಲ್ಪ ಸತ್ಕಾರ್ಯ ಮಾಡಬೇಕು ಎಂದು ಎಂದು ಕಿಲ್ಲಾ ತೊರಗಲ್ಲದ ಗಚ್ಚಿನ ಹಿರೇಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ತಾಲೂಕಿನ ಶಿವಪೇಠ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ತ್ರಿಕಾಲ ಜ್ಞಾನಿ, ಘನಮೌನಿ ಚಿಕ್ಕೇನಕೊಪ್ಪದ ಚನ್ನವೀರ ಶರಣರ 21 ನೇಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶಿರ್ವಚನ ನೀಡಿದ ಅವರು ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬ ನಾಣ್ನುಡಿಯಂತೆ, 30 ವರ್ಷಗಳ ಹಿಂದೆ ಮುದೇನಗುಡಿಯ ಬಸಪ್ಪ ಅವರು ಪ್ರವಚನಕಾರರು ಆದರೆ ಆಗಿನ ಕಾಲದಲ್ಲಿ ಅವರನ್ನು ಮೀರಿಸುವಂತಹ ಪ್ರವಚನಕಾರರಿಲ್ಲ. ಆಗ ಆಡಿಯೋ,ವಿಡಿಯೋ ಇದ್ದಿದ್ದರೆ ಅವು ಇಂದಿಗೂ ಸ್ಮರಣೀಯವಾಗುತ್ತಿತ್ತು ಎಂದು ಶ್ರೀಗಳು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ ಬಳಗಾನೂರ ಚಿಕ್ಕೇನಕೊಪ್ಪದ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರು ಆಶೀರ್ವಚನ ನೀಡುತ್ತಾ ಶಿವಶರಣರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ. ಹಸು ಪೂಜೆಗಷ್ಟೇ ಸೀಮಿತವಲ್ಲ ,ಅದು ಹೈನು ಕೊಟ್ಟಾಗ ಮಾತ್ರ ಬೆಲೆ ಬರುತ್ತದೆ ಹಾಗೆ ಮನುಷ್ಯ ಆಕಾರವಿದ್ದರೆ ಸಾಲದು ಅವನಲ್ಲಿ ಮಾನವೀಯತೆ ಇರಬೇಕು ಆಧ್ಯಾತ್ಮದ ಅನುಭವವನ್ನು ಪಡೆದುಕೊಂಡಾಗ ಮಾತ್ರ ಬೆಲೆ ಬರುತ್ತದೆ. ತೊರಗಲ್ಲ ಶ್ರೀಗಳು ಮಹಾದಾಯಿ ನದಿ ಜೋಡಣೆ ಹೋರಾಟದಲ್ಲಿ ಮುಂಚೂಣಿಯಲ್ಲಿದಂತೆ, ಹಿಂದಿನ ತೊರಗಲ್ಲ ಶ್ರೀಗಳು ಸಹ ರಾಜ ಮಹಾರಾಜರ ಕಾಲದಲ್ಲಿಯೂ ಹೋರಾಟಗಳಲ್ಲಿ ಮುಂದಾಳತ್ವ ವಹಿಸಿದ ಇತಿಹಾಸವಿದೆ ಎಂದು ಶಿವಶಾಂತವೀರ ಶರಣರು ಹೇಳಿದರು.

ಉಪಸ್ಥತಿ ಇಳಕಲ್ಲದ ಕೀರ್ತನ ಕೇಸರಿ ಆರ್‌. ಶರಣಬಸವ ಶಾಸ್ತ್ರೀಗಳು,. ಜಾನಪದ ಕಲಾವಿದ ಸಿದ್ದು

ಮೋಟೆ ತಂಡದಿಂದ ಜಾನಪದ ಡೊಳ್ಳಿನ ಗೀತೆಗಳು ನಡೆದವು. ಶ್ರೀಕಾಂತ ಹ.ಭಜಂತ್ರಿ ,

ಸಹನಾ ಗುರುಬಸಣ್ಣವರ ಪ್ರಾರ್ಥಿಸಿದರು,ಶಾಮಣ್ಣ ಮುಳ್ಳೂರ ಸ್ವಾಗತಿಸಿದರು,

ಮಲ್ಲಿಕಾರ್ಜುನ ಭಾವಿಕಟ್ಟಿ ನಿರೂಪಿಸಿ ಆಯ್‌ ಎಸ್‌. ಅಂಗಡಿ ವಂದಿಸಿದರು.

loading...

LEAVE A REPLY

Please enter your comment!
Please enter your name here