ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ

0
40

ಹುಬ್ಬಳ್ಳಿ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಮಹಿಳೆಯರನ್ನು ಚಾಕುವಿನಿಂದ ಇರಿದಿರುವ ಪ್ರಕರಣ ಇಲ್ಲಿಯ ಅಮರಗೋಳದ ಹೊಸಪೇಟ ಓಣಿಯಲ್ಲಿ ಜರುಗಿದೆ. ಯಲ್ಲಪ್ಪ ಬುರ್ಲಿ, ಎನ್ನುವವರು ಮನೆಯಲ್ಲಿ ಕಾರ್ಯಕ್ರಮ ಜರುಗುತ್ತಿದ್ದ ಸಮಯದಲ್ಲಿ ಊಟ ಮಾಡುತ್ತಿದ್ದಾಗ, ಒಮ್ಮಿಂದಮ್ಮಿಲೆ ಮನೆಗೆ ನುಗ್ಗಿದ ಅಶೋಕ ದಾಸನೂರ ಮತ್ತು ಕುಟುಂಬದವರು ದಾಳಿ ಮಾಡಿದ್ದಾರೆ. ಮೊದಲು ಯಲ್ಲಪ್ಪ ಬುರ್ಲಿ ಎನ್ನುವವರಿಗೆ ಚಾಕುವಿನಿಂದ ತಿವಿಯಲು ಪ್ರಯತ್ನಿಸಿದಾಗ ಆತ ತಪ್ಪಿಸಿಕೊಂಡಿದ್ದು, ನಂತರ ಮನೆಯಲ್ಲಿದ್ದ ಇಬ್ಬರ ಮಹಿಳೆಯರಿಗೆ ಚೊರಿಯಿಂದ ದುಷ್ಕರ್ಮಿಗಳು ಇರಿದಿದ್ದಾರೆ. ಸಾವಿತ್ರಿ ಸಂಕಣ್ಣವರ , ಸಾವಿತ್ರಿ ಬುರ್ಲಿ ಇರಿತಕ್ಕೊಳಗಾದವರು. ಗಾಯಾಳಗಳನ್ನು ಇಲ್ಲಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಅಮರಗೋಳದ ಅಶೋಕ ಹಾಗೂ ಯಲ್ಲಪ್ಪ ನಡುವೆ ಹಳೆ ವೈಷಮ್ಯವಿತ್ತು ಎನ್ನಲಾಗಿದೆ.

loading...

LEAVE A REPLY

Please enter your comment!
Please enter your name here