ಮನೆಗೊಂದು ಮರ-ಊರಿಗೊಂದು ವನ ಕಾರ್ಯಕ್ರಮ

0
36

ವಿಜಯಪುರ : ಅಪ್ಪ ಅಮ್ಮಂದಿರ ದಿನಾಚರಣೆ ನೆಪದಲ್ಲಿ ಕೇಕ್ ಕತ್ತರಿಸಿ ಸಮಯ ವ್ಯಯ ಮಾಡುವ ಕಾಲಘಟ್ಟದಲ್ಲಿದ್ದೆÃವೆ. ಜನ್ಮದಿನದ ಸಂದರ್ಭದಲ್ಲಿ ಗಿಡ-ಮರಗಳನ್ನು ಕಾಣಿಕೆ ರೂಪದಲ್ಲಿ ನೀಡಬೇಕು ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಯು.ಎನ್. ಕುಂಟೋಜಿ ಹೇಳಿದರು.
ದೇಶಪಾಂಡೆ ಫೌಂಡೇಶನ್ ವಿಜಯಪುರ ಘಟಕದ ವತಿಯಿಂದ ನಗರದ ಅಥಣಿ ರಸ್ತೆಯ ವಿದ್ಯಾನಗರ ಬಡಾವಣೆಯಲ್ಲಿ ಮನೆಗೊಂದು ಮರ ಊರಿಗೊಂದು ವನ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಿಡಮರಗಳನ್ನು ಹಚ್ಚಿ ಬೆಳೆಸಿ ಆ ಮರಗಳು ಸಾವಿರಾರು ವರ್ಷ ನೆರಳು ನೀಡಿ ಆಕ್ಸಿಜನ್ ಕೊಡುವುದರೊಂದಿಗೆ ಭೂ ತಾಪಮಾನ ಆಗದಂತೆ ಕಾಪಾಡುತ್ತದೆ. ಗಿಡ ಮರಗಳನ್ನು ಬೆಳೆಸುವುದರಿಂದ ಪರಿಸರ ಸಮೃದ್ಧಗೊಳ್ಳುತ್ತದೆ. ಇದರಿಂದ ಉತ್ತಮ ಹವೆ ಹಾಗೂ ಪಶು ಪಕ್ಷಿಗಳಿಗೆ ಆಶ್ರಯವಾಗುತ್ತದೆ. ಇಂದು ಗಿಡ ಮರಗಳನ್ನು ಕಟಾವು ಮಾಡುವುದರಲ್ಲಿ ನಿರತರಾಗಿದ್ದೆÃವೆ. ಇದರಿಂದ ಮಳೆಯ ಪ್ರಮಾಣ ಪ್ರತಿವರ್ಷ ಕಡಿಮೆಯಾಗುತ್ತಿದೆ. ಹಾಗೂ ಭೂ ತಾಪಮಾನ ಹೆಚ್ಚಾಗುವುದರೊಂದಿಗೆ ಅಂತರ್ಜಲ ಕ್ಷಿÃಣಿಸುತ್ತಿರುವುದು ನಾವಿಂದು ಕಾಣುತ್ತಿದ್ದೆÃವೆ ಹಾಗೂ ಹನಿ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ ರಂಜಿತಾ ಕಿತ್ತೂರ ಮಾತನಾಡಿದರು.
ರವಿ ಕಿತ್ತೂರ, ಆರ್.ಎನ್. ಕುಲಕರ್ಣಿ, ಎನ್.ಜಿ. ಕೋಟ್ಯಾಳ, ಆರತಿ ಹಳ್ಳಿ, ಸತೀಶ ಯಂಕಟಿ, ಅನಿತಾ ಸಕ್ರಿ, ಭಾರತಿ ಹಳ್ಳಿ, ರಾಹುಲ ಜಾಧವ ಮೊದಲಾದವರು ಉಪಸ್ಥಿತರಿದ್ದರು.

loading...