ಮನೆಯಲ್ಲಿ ನಲಿಯುವ ಮಗುವಿರಲಿ, ಮಗುವಿಗೊಂದು ಮರವಿರಲಿ

0
29

ಗದಗ: ಪರಿಸರ ಸಮತೋಲನ ಕಾಪಾಡಲು ಇಂದು ಅರಣ್ಯ ಅಭಿವೃದ್ಧಿ ಅಗತ್ಯವಾಗಿದ್ದು, ಮನೆಯಲ್ಲಿ ನಲಿಯುವ ಮಗುವಿರಲಿ, ಮಗುವಿಗೊಂದು ಮರವಿರಲಿ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಮನೆಯಂಗಳದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಉತ್ತಮ ಪರಿಸರ ನಿರ್ಮಿಸಬೇಕು ಎಂದು ಮಲ್ಲಸಮುದ್ರಗಿರಿಓಂಕಾರೇಶ್ವರ ಮಠದ ಪೀಠಾಧಿಪತಿ ಫಕೀರೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗಾವಿ ಗ್ರಾಮದಲ್ಲಿ ಶಿವಬಸವ ಕಲ್ಯಾಣ ಸಂಸ್ಥೆ, ಬಸವೇಶ್ವರ ಭಜನಾ ಸಂಘ, ಗಂಗಾಧರೇಶ್ವರ ಯುವಕ ಸಂಘ ಹಾಗೂ ನಾಗಾವಿ ಗ್ರಾಮದ ಸಮಸ್ತ ನಾಗರಿಕರಿಂದ ಪಂ.ಪಂಚಾಕ್ಷರಿ ಗವಾಯಿಗಳ, ಡಾ.ಪಂ.ಪುಟ್ಟರಾಜ ಶಿವಯೋಗಿ ಹಾಗೂ ಸಿದ್ಧಗಂಗಾಮಠದ ಡಾ.ಶಿವಕುಮಾರ ಶಿವಯೋಗಿಗಳ ಸ್ಮರಣೆಯೊಂದಿಗೆ ಸೋಮೇಶ್ವರನ ಜಯಂತ್ಯುತ್ಸದವ ನಿಮಿತ್ತ ಹಮ್ಮಿಕೊಂಡ ಹಸಿರು ಹಬ್ಬ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಳೆ ಬೆಳೆಯ ಪ್ರಮಾಣ ಏಕೆ ಕುಸಿಯುತ್ತಿದೆ ಎಂಬುದನ್ನು ವಿಚಾರ ಮಾಡಿದಾಗ ಶೇ.೫೦ರಷ್ಟು ಮರಗಳ ಮಾರಣ ಹೋಮದಿಂದಲೇ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದ್ದರಿಂದ ಎಲ್ಲರಿಗೂ ಮಾರ್ಗದರ್ಶನ ಕಾರ್ಯಕ್ರಮವಾಗಿದೆ. ವಿಶ್ವಕ್ಕೆ ಮಳೆಬೆಳೆ ಹೋಯಿತು ಎಂಬುದನ್ನು ವಿಚಾರ ಮಾಡಿದಾಗಿ ಮರಗಳನ್ನು ಬೆಳೆಸಬೇಕಾಗಿದೆ. ಮರಗಳನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಕಡಿಯುತ್ತಿದ್ದು, ತಕ್ಷಣದಿಂದಲೇ ಎಲ್ಲರೂ ಮರಗಳನ್ನು ಬೆಳೆಸಿ ಉಳಿಸಿದಾಗ ಮಾತ್ತ ದೇಶಕ್ಕೆ ಭವಿಷ್ಯವಿದೆ ಎಂದರು.
ಜಿಲ್ಲೆಯನ್ನು ಸಸ್ಯಕಾಶಿಯನ್ನಾಗಿ ಮಾಡಿದಾಗ ಮಾತ್ರ ಈ ಭಾಗದಲ್ಲಿ ಉತ್ತಮ ಮಳೆಬೆಳೆ ಬಂದು ರೈತಾಪಿ ಜನರು ಸುಖ ಜೀವನ ನಡೆಸಲು ಸಾಧ್ಯವಾಗುತ್ತದೆ. ಎಲ್ಲರೂ ಮನೆಯಲ್ಲಿನ ತಮ್ಮ ಮಕ್ಕಳನ್ನು ಬೆಳಿಸಿ ಪೋಷಿಸುವಂತೆ ಸಸಿಗಳನ್ನು ಬೆಳೆಸಬೇಕು ಎಂದು ಸ್ವಾಮೀಜಿ ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಭದ್ರೆÃಶ ಕುಸ್ಲಾಪೂರ ಮಾತನಾಡಿ, ಶಿವಬಸವ ಕಲ್ಯಾಣ ಸಂಸ್ಥೆಯ ಬಸವಣ್ಣೆಯ್ಯ ಹಿರೇಮಠ ಅವರು ತಮ್ಮ ಪುತ್ರ ಲಿಂ. ಸೋಮೇಶ್ವರಯ್ಯ ಬಸವಣ್ಣೆಯ್ಯ ಹಿರೇಮಠ ಅವರ ೨೩ನೇ ಜಯಂತ್ಯೊÃತ್ಸವದ ಅಂಗವಾಗಿ ಗ್ರಾಮದಲ್ಲಿ ಹಸಿರುಹಬ್ಬ ಕಾರ್ಯಕ್ರಮ ಹಮ್ಮಕೊಂಡಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಲಿಂಗಯ್ಯಶಾಸ್ತಿç ಸಿದ್ಧಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಲಿಂ. ಸೋಮೇಶ್ವರಯ್ಯನವರ ಕಾಯ ಅಳಿದರೂ, ಅವರು ಮಾಡಿದ ಕಾರ್ಯಗಳು ಉಳಿದಿವೆ. ಈಗ ಗ್ರಾಮದಲ್ಲಿ ಸಸಿಗಳ ರೂಪದಲ್ಲಿ ಅವರು ಮತ್ತೆ ಜನ್ಮತಾಳಿದ್ದಾರೆ ಎಂದು ಹೇಳಿದರು.
ಮುಂಜಾನೆ ನಾಗಾವಿ ಗ್ರಾಮದ ಸಮಸ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಹಸಿರು ಹಬ್ಬ ಸಸಿ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮ ಮಲ್ಲಸಮುದ್ರಗಿರಿಯ ಸೊರಟೂರು ಹಿರೇಮಠದ ಫಕೀರೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಿತು.
ತಾಪಂ ಮಾಜಿ ಅಧ್ಯಕ್ಷ ಬಸವಣ್ಣೆಪ್ಪ ಚಿಂಚಲಿ, ಬಾಬು ಸುಂಕದ, ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಮಂಜವ್ವ ಅಸುಂಡಿ, ಅಂಬರೇಶ ಬೆನಕನಾಳಮಠ, ಬಸವಣ್ಣೆಯ್ಯ ಹಿರೇಮಠ, ಮಂಜುನಾಥ ಬೆಂತೂರ, ವೆಂಕಟೇಶ ಬೇಲೂರ, ಮಹೇಶ ದಾಸರ, ಬಾಲರಾಜ ಪೇಠಾಲೂರ, ಹೂನವ್ವ ಹರಿಯಪ್ಪ ಲಮಾಣಿ, ಗ್ರಾಪಂ ಸದಸ್ಯರಾದ ಸುರೇಶ ಚವ್ಹಾಣ, ಜಗದೀಶ ಚಿಂಚಲಿ, ಗಣೇಶ ಲಮಾಣಿ, ಸಕ್ಕೂಬಾಯಿ ಚವ್ಹಾಣ, ಮೀರಾಬಾಯಿ ಪೂಜಾರ, ಮಲ್ಲಪ್ಪ ಹೊಂಬಳ, ಯಲ್ಲಪ್ಪ ಹಡಗಲಿ, ಆರ್‌ಎಫ್‌ಓ ಎಸ್.ಎಂ.ಲಮಾಣಿ, ಉಪವಲಯ ಅರಣ್ಯಾಧಿಕಾರಿ (ಸಾಮಾಜಿಕ ವಲಯ) ಎಂ,ಎಚ್. ಚವ್ಹಾಣ, ಬಾಬು ಸುಂಕದ, ವೈ.ಪಿ ಅಡ್ನೂರ,ಮಹೇಶ ಶಿರಹಟ್ಟಿ, ಮಹಾದೇವಪ್ಪ ಹಡಪದ, ಮಲ್ಲೆÃಶ ನಡುವಿನಮನಿ ಉಪಸ್ಥಿತರಿದ್ದರು.
ಗ್ರಾಮದಲ್ಲಿ ಜರುಗಿದ ಹಸಿರು ಹಬ್ಬದ ಜನಜಾಗೃತಿ ಜಾಥಾದಲ್ಲಿ ಕಾಶೀಪೀಠದ ವಟುಗಳು, ವಿದ್ಯಾರ್ಥಿಗಳು, ಗ್ರಾಮದ ಗಣ್ಯರು, ಮಹಿಳೆಯರು, ಪಾಲ್ಗೊಂಡಿದ್ದರು. ಮಲ್ಲಪ್ಪ ಗೋಲಪ್ಪನವರ ನಿರೂಪಿಸಿದರು.

loading...