ಮನೆ ಕಳ್ಳತನ -ಇಬ್ಬರ ಬಂಧನ

0
30

ಮನೆ ಕಳ್ಳತನ -ಇಬ್ಬರ ಬಂಧನ

ಕನ್ನಡಮ್ಮ ಸುದ್ದಿ-ಹುಕ್ಕೇರಿ : ಜ.5 ರಂದು ಹುಕ್ಕೇರಿ ಪಟ್ಟಣದ ಬೈಪಾಸ್ ಬಳಿಯ ಮನೆ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಪೋಲಿಸರು ಬಂಧಿಸಿದ್ದ ಘಟನೆ ಜಿಲ್ಲೆಯ ಹುಕ್ಕೇರಿಯಲ್ಲಿ ಸೋಮವಾರ ನಡೆದಿದೆ .

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಉರ್ಫ ಪಾರಸ ಅಶೋಕ ಕಮಟೇಕರ (22) ಹಾಗೂ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಅನ್ವರ ಖಾಜೇಸಾಬ ಮುಲ್ತಾನಿ(21) ಬಂಧಿತರು.
ಇವರಲ್ಲಿ ಓರ್ವ ಪರಶುರಾಮ ಉರ್ಫ ಪಾರಸ ಅಶೋಕ ಕಮಟೇಕರ ಕಳೆದ ವರ್ಷ ಹುಕ್ಕೇರಿ ಉಪಕಾರಾಗೃಹದ ಕಿಟಕಿ ಸರಳು ಮುರಿದು ಪರಾರಿಯಾಗಿದ್ದವನು ಬಂಧನವಾಗಿರುವುದು ವಿಶೇಷ. ಇವರೀರ್ವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

: ಘಟನೆ ವಿವರ

ಸೋಮವಾರ ಬೆಳಿಗ್ಗೆ ತಾಲೂಕಿನ ರಕ್ಷಿ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪರಶುರಾಮ ಉರ್ಫ ಪಾರಸ ಅಶೋಕ ಕಮಟೇಕರ ಹಾಗೂ ಅನ್ವರ ಖಾಜೇಸಾಬ ಮುಲ್ತಾನಿ ಇಬ್ಬರನ್ನು ಬಂಧಿಸಿ ವಿಚಾರಿಸಿದಾಗ ಅವರು ಜ.5 ರಂದು ಪಟ್ಟಣದ ಬೈಪಾಸ್ ಬಳಿಯ ವೀರಪ್ಪಾ ಸದೆಪ್ಪಾ ಹಳದಿ ಅವರ ಮನೆ ಕಳ್ಳತನ ಹಾಗೂ ಕಳೆದ ವರ್ಷ 2018ರಲ್ಲಿ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ಬಸವೇಶ್ವರ ಅರ್ಬನ್ ಬ್ಯಾಂಕ್ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.

ಹುಕ್ಕೇರಿಯ ಬೈಪಾಸ್ ಬಳಿಯ ವೀರಪ್ಪಾ ಸದೆಪ್ಪಾ ಹಳದಿ ಅವರ ಮನೆಯಲ್ಲಿ ಒಟ್ಟು 1.33.000 ರೂ ಮೌಲ್ಯದ 38ಗ್ರಾಂ 500ಮಿಲಿ ತೂಕದ ಬಂಗಾರ ಆಭರಣ,12 ಸಾವಿರ ರೂ ಮೌಲ್ಯದ 20 ಗ್ರಾಂ ಬೆಳ್ಳಿ ಆಭರಣಗಳನ್ನು ಹಾಗೂ ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ರಾಡ್ ಸಹ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...