ಮಮದಾಪೂರ ಗ್ರಾಮದಲ್ಲಿ ಶಿವ ಸಪ್ತಾಹ ಕಾರ್ಯಕ್ರಮ

0
37

ಗೋಕಾಕ: ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 7 ದಿನಕಳ ಕಾಲ ಶಿವ ಸಪ್ತಾಹ ಕಾರ್ಯಕ್ರಮವು ಪ್ರಾರಂಭವಾಗಿದೆ.
ಈ ಶಿವ ಸಪ್ತಾಹ ಕಾರ್ಯಕ್ರಮವು ದಿ. 7 ರಿಂದ ಪ್ರಾರಂಭಗೊಂಡಿದ್ದು, ಶ್ರೀ ಚರಮೂರ್ತೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಪ್ರಾರಂಭಗೊಂಡಿದ್ದು ಸತತ 7 ದಿನಗಳ ಕಾಲ ನಿರಂತರ ಹರಿ ಭಜನೆ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಹಾಗೂ ಸರ್ವ ಧರ್ಮಗಳ ಭಜನಾ ಮಂಡಳಿಗಳ ಭಕ್ತರು ಪಾಲ್ಗೊಂಡು ಭಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ದಿ. 14 ರಂದು ಈ ಕಾರ್ಯಕ್ರಮವು ಸಮಾಪ್ತಗೊಳ್ಳಿದ್ದು, ಅಂದು ಗ್ರಾಮದ ಮುತ್ತೈದೆಯರು ಆರತಿಯೊಂದಿಗೆ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಶ್ರೀ ಚರಮೂರ್ತೇಶ್ವರ ಸ್ವಾಮೀಗಳ ಭಾವಚಿತ್ರವನ್ನು ಗ್ರಾಮದಾದ್ಯಂತ ಮೆರವಣಿಗೆ ನಡೆಸಿ ನಂತರ ಮಹಾ ಪ್ರಸಾದ ಜರುಗುವುದು.
ಕಾರಣ ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುಣೀತರಾಗಬೇಕೆಂದು ಮಮದಾಪೂರದ ಶ್ರೀ ಚರಮೂತೇಶ್ವರ ಸ್ವಾಮಿಜಿ ಹಾಗೂ ಭಕ್ತ ಮಂಡಳಿಯವರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

loading...

LEAVE A REPLY

Please enter your comment!
Please enter your name here