ಮರಿಕಟ್ಟಿಯಲ್ಲಿ ವಾಲ್ಮೀಕಿ ಜಯಂತಿ

0
48

ಬೆಳಗಾವಿ 20: ಮಹರ್ಷಿ ವಾಲ್ಮೀಕಿ ಜೀವನದಲ್ಲಿ ಆದ ಪರಿವರ್ತನೆಯನ್ನು ಮುಂದಿಟ್ಟುಕೊಂಡು ಪ್ರತಿಯೊಬ್ಬರು ನಡೆದಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಗ್ರಾಪಂ ಸದಸ್ಯ ಅದೃಶಗೌಡ.ಗು. ಪಾಟೀಲ ಹೇಳಿದರು.

ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಗ್ರಾಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ನಂತರ ವಾಲ್ಮೀಕಿ ಸೇನೆ ಅಧ್ಯಕ್ಷ ಶಂಕರ ತಳವಾರ ಮಾತನಾಡಿ ಜಗದ ಕಣ್ಣು ತೆರೆಸಿದ ವಾಲ್ಮೀಕಿ ರಾಮಾಯಣದಲ್ಲಿನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸೇನೆಯ ಉಪಾಧ್ಯಕ್ಷ ಯಮನಪ್ಪ ಕೊಳಿಕೊಪ್ಪ, ಚಂದ್ರು ತಳವಾರ, ಗಂಗಪ್ಪ ತಳವಾರ, ಪಕ್ಕೀರ ತಳವಾರ, ಯಲ್ಲಪ್ಪಾ ಕುಂದರಗಿ, ಮೌಲಾಸಾಬ ನಧಾಪ್, ಅದೃಶಗೌಡ.ಚಾ.ಪಾಟೀಲ, ಬಸಪ್ಪಾ ತಳವಾರ, ಸಿದ್ದಪ್ಪ ತಳವಾರ, ಮಲ್ಲನಗೌಡ ಕೋರಿ ಸೇರಿದಂತೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here