ಮಳೆಯ ನಡುವೆಯು ಬಿರುಸಿನ ಮತದಾನ

0
12

 

ಕನ್ನಡಮ್ಮ ಸುದ್ದಿ-ಮುಂಡಗೋಡ: ಮಂಗಳವಾರ ಬಾರೀ ಮಳೆಯ ನಡುವೆಯು ಕೂಡ ತಾಲೂಕಿನಲ್ಲಿ ಲೋಕಸಭಾ ಚುನಾವಣೆಗೆ ಬಿರುಸಿನ ಮತದಾನ ನಡೆಯಿತು. ಬೆಳಗ್ಗಿನಿಂದ ಮಂದಗತಿಯಲ್ಲಿ ಪ್ರಾರಂಭವಾದ ಮತದಾನ ಸಮಯ ಕಳೆಯುತ್ತ ಬಿರುಸು ಪಡೆದುಕೊಂಡಿತು. ಮಧ್ಯಾಹ್ನ ೧ ಘಂಟೆ ವೇಳೆಗೆ ಸುರಿಯಲಾರಂಭಿಸಿದ ಆಲಿಕಲ್ಲು ಮಳೆಗೆ ಮತದಾರರು ತತ್ತರಿಸಿ ಹೋದರು. ರಬಸದ ಮಳೆಯಿಂದ ತಪ್ಪಿಸಿಕೊಳ್ಳಲು ಸರದಿ ಸಾಲು ಬಿಟ್ಟು ಕೊಠಡಿಯೊಳಗೆ ಆಶ್ರಯ ಪಡೆಯುವಂತಾಯಿತು. ಸುಮಾರು ೧ ಘಂಟೆಗೂ ಅಧಿಕ ಸಮಯ ಸುರಿದ ಮಳೆ ನಿಂತ ಬಳಿಕ ಮತ್ತೆ ಮತದಾನ ಸರಾಗವಾಗಿ ನಡೆಯಿತು. ರಬಸದ ಮಳೆಯಿಂದಾಗಿ ಪಟ್ಟಣದ ಬಸವನಗರ ಶಾಲೆಯಲ್ಲಿ ತೆರೆಯಲಾಗಿದ್ದ ಸಖಿ ಮತಗಟ್ಟೆ ಆವರಣ ಸಂಪೂರ್ಣ ಜಲಾವೃತವಾಗಿತ್ತು. ಇದರಿಂದ ಮತದಾರರು ಮತಗಟ್ಟೆ ಪ್ರವೇಶಿಸಲು ಪರದಾಡಬೇಕಾಯಿತು. ಸಹಸ್ರಾರು ಸಂಖ್ಯೆಯ ಯುವ ಮತದಾರರು ಭಾರೀ ಜೋಶ್‌ನಲ್ಲಿ ಮತ ಚಲಾವಣೆ ಮಾಡಿದರೆ. ಪುರುಷರು, ಮಹಿಳೆಯರು ವೃದ್ಧರು ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಮತದಾನ ಬಹಿಷ್ಕಾರದಿಂದ ವಿಳಂಬವಾಗಿ ಪ್ರಾರಂಭವಾದ ಮತದಾನ: ತಾಲೂಕಿನ ಬೆಡಸಗಾಂವ ಗ್ರಾ.ಪಂ ವ್ಯಾಪ್ತಿಯ ಕಂಚಿಕೊಪ್ಪ, ಅಟಬೈಲ್ ಗ್ರಾಮಸ್ಥರು ತಮಗೆ ಅರಣ್ಯ ಅತಿಕ್ರಮಣ ಭೂಮಿ ಮಂಜೂರಿ ಮಾಡದೆ ಇರುವುದು ರಸ್ತೆ ಸುಧಾರಣೆ, ಬಸ್ ನಿಲ್ದಾಣ ಸೇರಿದಂತೆ ವಿವಿದ ಮೂಲಭೂತ ಸೌಲಭ್ಯ ನೀಡಲಾಗಿಲ್ಲ ಎಂಬ ಕಾರಣ ನೀಡಿ ಮತದಾನ ಬಹಿಷ್ಕರಿಸಿದ್ದರು.
ಸುಮಾರು ೧೦.೩೦ ರ ವೇಳೆಗೆ ತಹಸೀಲ್ದಾರ ಶಂಕರ ಗೌಡಿ, ಕ್ಷೆÃತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಹಾಗೂ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಯಾವುದೇ ಸಮಸ್ಯೆ ಇದ್ದರೂ ಚುನಾವಣೆ ಬಳಿಕ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಮತದಾನದಿಂದ ದೂರ ಉಳಿಯದಂತೆ ತಾಕೀತು ಮಾಡಿದರು. ಇದಕ್ಕೆ ಜಗ್ಗದ ಗ್ರಾಮಸ್ಥರು ತಮಗೆ ಅರಣ್ಯ ಅತಿಕ್ರಮಣ ಭೂಮಿ ಮಂಜೂರಿಯಲ್ಲಿ ಅನ್ಯಯವಾಗಿದೆ ಸರಿಪಡಿಸುವಂತೆ ಫೆಬ್ರವರಿ ೨೧ ರಂದು ಮನವಿ ಸಲ್ಲಿಸಿದರೂ ಯಾವುದೇ ರೀತಿ ಸ್ಪಂದನೆ ಸಿಕ್ಕಿಲ್ಲ ಅಲ್ಲದೇ ನಮ್ಮ ಕೃಷಿ ಸಾಲ ಮನ್ನಾ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳಿಂದ ರುಣಮುಕ್ತ ಪತ್ರ ಬಂದರೂ ಕೂಡ ಸಾಲ ವಸೂಲಿ ಮಾಡುವುದು ಮಾತ್ರ ನಿಂತಿಲ್ಲ ಎಂದು ಆಕ್ರೊÃಶ ವ್ಯಕ್ತಪಡಿಸಿದರು. ಶೀಗ್ರದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ಲಿಖಿತವಾಗಿ ಬರವಸೆ ನೀಡಿದ ಬಳಿಕ ೧೧ ಘಂಟೆಯಿಂದ ಮತದಾನ ಪ್ರಾರಂಭವಾಯಿತು.

loading...