ಮಳೆ ಗಾಳಿಗೆ ಕಿತ್ತೊದ ಮೇಲ್ಛಾವಣಿ : ಸ್ಥಳಕ್ಕೆ ತಹಶೀಲ್ದಾರ ಭೇಟಿ

0
53

ಕನ್ನಡಮ್ಮ ಸುದ್ದಿ-ಮುಗಳಿಹಾಳ: ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಭಾನುವಾರ ಸಂಜೆ ಸುರಿದ ದಾರಾಕಾರ ಮಳೆ ಬಿರುಗಾಳಿಯಿಂದ ಬಸವ್ವ ಕಾಳಿ ಎಂಬುವವರ ಮನೆಯ ಮೇಲ್ಛಾವಣಿ ಕಿತ್ತು ಹೋಗಿದ್ದು ಅಪಾರಪ್ರಮಾಣದ ನಷ್ಟ ಸಂಭವಿಸಿದೆ. ಸ್ಥಳಕ್ಕೆ ತಹಸಿಲ್ದಾರ ಗಿರೀಶ ಸಾದಿ ಬೇಟಿ ನೀಡಿದರು. ಗ್ರಾಮದಲ್ಲಿ ಅಲಲ್ಲಿ ರೈತರ ತೆಂಗಿನ ಗಿಡಗಳು ಬಿರುಗಾಳಿಗೆ ಬಿದ್ದಿವೆ ಮತ್ತು ವಿದ್ಯತ್ ಕಂಬಗಳು ಉರುಳಿ ಬಿದ್ದಿವೆ. ಭಾನುವಾರ ಸುರಿದ ಮಳೆಗೆ ಗ್ರಾಮದ ಸುತ್ತಮುತ್ತಲೂ ಸುರಿದ ಮಳೆ ಬಿರುಗಾಳಿಯಿಂದ ಬೆಳೆಗಳು ಗೋವಿನಜೋಳ ಕಬ್ಬು ನೆಲಕ್ಕೆ ಅಪ್ಪಳಿಸಿವೆ ರೈತರು ಅಪಾರ ಹಾನಿಗೋಳಗಾಗಿದ್ದರೆ. ತಕ್ಷಣ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಸ್ಥಳಕ್ಕೆ ಕಂದಾಯ ನಿರೀಕ್ಷಕ ಎಮ್.ಎಸ್.ಜೋಗಿ. ಗ್ರಾಪಂ ಅಧ್ಯಕ್ಷ ವಿಠ್ಠಲ ದಳವಾಯಿ. ಗ್ರಾಪಂ ಉಸ್ತುವಾರಿ ಸದಸ್ಯ ರಮೇಶ ಧರ್ಮಟ್ಟಿ. ಬಸವರಾಜ ದಳವಾಯಿ. ವಿಠ್ಠಲ ಕೂಳ್ಳೂರ. ಜಗದೀಶ ದಳವಾಯಿ. ಸಿದ್ದಪ್ಪ ದಳವಾಯಿ. ಮಂಜುನಾಥ ದಳವಾಯಿ ಬೇಟಿ ಪರಿಶೀಲನೆ ನಡೆಸಿದರು.

loading...