ಮಹದಾಯಿ ನದಿ ನೀರನ್ನು ಒದಗಿಸಲು ಸರ್ಕಾರಗಳು ವಿಫಲ: ಚೆಲುವಣ್ಣವರ

0
49

ನರಗುಂದ : ಕಾವೇರಿ ನದಿ ಭಾಗದಲ್ಲಿಯ ರೈತರು ಬೆಳೆಗಳಿಗೆ ನೀರು ಕೇಳಿದರೆ ರಾಜ್ಯ ಸರ್ಕಾರ ನೀರು ಹರಿಸಲಿಲ್ಲ. ಆದರೆ ತಮಿಳುನಾಡಿನ ಸಾಂಬಾ,ಕುರ್ವೆ ಬೆಳೆಗಳಿಗೆ ನೀರು ಹರಿಸಿದ ರಾಜ್ಯ ಸರ್ಕಾರದ ಧೋರಣೆಯನ್ನು ರೈತರು ಟೀಕೆಮಾಡುವಂತಾಗಿದೆ. ಇದರಂತೆ ಗೋವಾ ಸರ್ಕಾರದಲ್ಲಿ ಇಬ್ಬರೇ ಸಂಸತ್ ಸ್ಥಾನವಿದ್ದರೂ ಅಲ್ಲಿಯ ರೈತರ ಬೇಸಾಯಕ್ಕೆ ನಮ್ಮಲ್ಲಿಯ ಮಹದಾಯಿ ನದಿನೀರನ್ನು ಕಳೆದ 40 ವರ್ಷದಿಂದ ಬಳಕೆಮಾಡಲು ಶ್ರಮಿಸಿದ್ದಾರೆ. ಸಿಡಬ್ಲೂಸಿ ವರದಿಯಂತೆ ನಮ್ಮ ಪಾಲಿನ ಮಹದಾಯಿ ನದಿ ನೀರನ್ನು ಒದಗಿಸಲು ಸರ್ಕಾರಗಳು ವಿಫಲವಾಗಿವೆ ಎಂದು ರೈತ ಮುಖಂಡ ಯಲ್ಲಪ್ಪ ಚೆಲುವಣ್ಣವರ ಇಂದಿಲ್ಲಿ ಸರ್ಕಾರಗಳ ಮೇಲೆ ಟೀಕಾ ಪ್ರಹಾರ ಮಾಡಿದರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗಾಗಿ ಆಗ್ರಹಿಸಿ ನರಗುಂದದಲ್ಲಿ ಗುರುವಾರ ರೈತರು ನಡೆಸಿದ ಧರಣಿ 428 ನೇ ದಿನಕ್ಕೆ ಕಾಲಿರಿಸಿದ್ದು ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ಹಾಗೂ ಮಹದಾಯಿ ನದಿ ನೀರಿನ ವಿವಾದಕ್ಕೆ ರಾಜ್ಯಕ್ಕೆ ಸೋಲಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ ಖಂಡಿಸಿ ಧಾರವಾಡದಲ್ಲಿ ಮನ್ಸೂರಮಠದ ಬಸವರಾಜದೇವರು ಹಾಗೂ ಅಲ್ಲಿಯ ಹೋರಾಪರ ಸಂಘಟಣೆಗಳು ಗುರುವಾರ ಬೆಳಿಗ್ಗೆ ರೈಲು ತಡೆ ಪ್ರತಿಭಟಣೆ ನಡೆಸಿದರೆ ಬಸವರಾಜದೇವರು ಸೇರಿದಂತೆ 20 ರೈತರನ್ನು ಬಂಧಿಸಿ ಅವರ ಮೇಲೆ ಸರ್ಕಾರ ಕೇಸ್ ದಾಖಲಿಸಿದೆ. ಇದೆಲ್ಲ ನೋಡಿದಲ್ಲಿ ನಮ್ಮ ಬೇಡಿಕೆ ಈಡೇರಿಸಲು ಸರ್ಕಾರಗಳು ವಿಫಲವಾದಾಗ ಪ್ರತಿಭಟಣೆ ನಡೆಸಿದರೆ ರೈತರನ್ನು ಬಂಧಿಸುವಂತಹ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಸಿಡಿಮಿಡಿಗೊಂಡರು.
ರಮೇಶ ನಾಯ್ಕರ್ ಮಾತನಾಡಿ, ನಾಡಿನ ಏಕೀಕರಣ ಸಂದರ್ಭದಲ್ಲಿ ಅನೇಕ ಮಹಿಳೆಯರು ಪಾಲ್ಗೊಂಡು ದಿಟ್ಟ ಹೋರಾಟ ನಡೆಸಿದರು. ಮಹದಾಯಿ ನದಿ ನೀರಿನ ಬೇಡಿಕೆಗೆ ಇನ್ನೂ ಹೆಚ್ಚಿನ ಮಹಿಳೆಯರು ಭಾಗವಹಿಸಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸವಾಗಬೇಕಿದೆ. ಮಹದಾಯಿ ನಮ್ಮ ಪಾಲಿನ ನೀರಿನ ಹಕ್ಕನ್ನು ನೀಡದೇ ಹೋದಲ್ಲಿ ರೈತರ ಹೋರಾಟ ದೀರ್ಘವಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶ್ರೀಶೈಲ ಮೇಟಿ ಮಾತನಾಡಿ, ನೀರಿಗಾಗಿ ರೈತರು ನಡೆಸಿದ ಧರಣಿ ಪ್ರತಿಭಟಣೆಗಳಿಗೆ ಸರ್ಕಾರ ಕಣ್ಣು ತೆರೆಯುತಿಲ್ಲ. ನ್ಯಾಯಮಂಡಳಿಯ ಮೇಲೆ ಈ ವಿವಾದಗಳನ್ನು ಎತ್ತಿಹಾಕಿ ಸಂಸದರು,ಶಾಸಕರು ಐಷಾರಾಮಿ ಜೀವನ ನಡೆಸುವುದನ್ನು ಕೈಬಿಟ್ಟು ಮಹದಾಯಿ ನಮ್ಮ ಪಾಲಿನ ನೀರನ್ನು ಕೊಡಿಸಲು ಮುಂದಾಗಲಿ. ಹೆಸರು ಮತ್ತು ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ಸರ್ಕಾರಗಳು ಕಣ್ಣಿರು ತರಿಸುವ ಹಾಗೆ ಮಾಡಿವೆ. ಸರಿಯಾದ ಬೆಲೆಯಲ್ಲಿ ರೈತರ ಉತ್ಪನ್‍ಗಳನ್ನು ಖರೀಧಿಸದೇ ಸರ್ಕಾರ ರೈತರ ಮೇಲೆ ಗಧಾಪ್ರಯಾರ ಮಾಡುತ್ತಿದೆ ಎಂದು ಹೇಳಿದರು.
ಹನುಮಂತ ಸರನಾಯ್ಕರ್ ಮಾತನಾಡಿ, ಮಹದಾಯಿ ನಮ್ಮ ಪಾಲಿನ ನೀರನ್ನು ನಮಗೆ ಕೊಡಿ ಎಂದು ಗೋವಾಕ್ಕೆ ಆಗ್ರಹಿಸಿದರೆ ಗೋವಾದ ವಕೀಲರು ನಮ್ಮಲ್ಲಿ ಹರಿದುಹೋಗಿರುವ ಬೆಣ್ಣೆಹಳ್ಳದ ನೀರನ್ನು ಕರ್ನಾಟಕ ಸರ್ಕಾರ ಅದಕ್ಕೊಂದು ಯೋಜನೆ ರೂಪಿಸಿ ರೈತರಿಗೆ ನೀರು ಒದಗಿಸಬಹುದಲ್ಲವೇ ಎಂದು ಸಲಹೆ ನೀಡಿದ್ದಾರೆ. ಬೆಣ್ಣೆಹಳ್ಳದ ನೀರು ನಮ್ಮ ರಾಜ್ಯದ್ದು ಇದರ ಬಗ್ಗೆ ಸಲಹೆ ನೀಡುವ ಅಗತ್ಯವಿಲ್ಲ ಆದರೆ ನಮ್ಮ ಪಾಲಿನ ಮಹದಾಯಿ ನದಿ ನೀರನ್ನು ಕಳೆದ 40 ವರ್ಷದಿಂದ ಬಳಸಿಕೊಳ್ಳುತ್ತಿರುವ ಗೋವಾ ಸರ್ಕಾರಕ್ಕೆ ವಕೀಲರು ಸಲಹೆ ನೀಡಿ ನಮ್ಮ ಪಾಲೀನ ನೀರು ಒದಗಿಸಲು ಕಾಳಜೀವಹಿಸಲಿ ಎಂದು ಹೇಳಿದರು.
ಪರಶುರಾಮ ಜಂಬಗಿ ಮಾತನಾಡಿದರು. ಧರಣಿಯಲ್ಲಿ ಎ.ಪಿ. ಪಾಟೀಲ, ಎಸ್.ಬಿ. ಜೋಗಣ್ಣವರ, ವೆಂಕಪ್ಪ ಹುಜರತ್ತಿ. ಸಿದ್ದಪ್ಪ ಚಂದ್ರತ್ನವರ, ವೀರಣ್ಣ ಗಡಗಿ, ವೀರಣ್ಣ ಸೊಪ್ಪಿನ, ಸೋಮಲಿಂಗಪ್ಪ ಆಯಟ್ಟಿ, ಬಸಮ್ಮ ಐನಾಪೂರ, ಚನ್ನಮ್ಮ ಕರ್ಜಗಿ, ಅನಸವ್ವ ಶಿಂಧೆ. ಸಾವಿತ್ರಿ ಬೋಳಶೆಟ್ಟಿ, ನಾಗರತ್ನಾ ಸವಳಬಾವಿ. ವಾಸು ಚವ್ಹಾಣ, ಎಸ್.ಬಿ. ಕೊಣ್ಣೂರ, ಯಲ್ಲಪ್ಪ ಗುಡದರಿ, ಪುಂಡಲೀಕಪ್ಪ ಯಾದವ, ಕಾಡಪ್ಪ ಕಾಕನೂರ, ಗಂಗವ್ವ ಹಡಪದ, ಮಲ್ಲವ್ವ ಬೋವಿ, ಕಾಶವ್ವ ವಾಗ್ಮೋಡೆ, ಮಲ್ಲಮ್ಮ ನುಗ್ಗಾನಟ್ಟಿ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here