ಮಹರ್ಷಿ ವಾಲ್ಮೀಕಿಯಂಥ ಮಹಾನ್ ವ್ಯಕ್ತಿಗಳನ್ನು ಜಾತಿಗೆ ಕಟ್ಟು ಹಾಕಬೇಡಿ : ಜಿ.ಪಂ.ಅಧ್ಯಕ್ಷ ಕೋಳಕರ

0
50

 

kolkeri

 

 

 

 

 

 

ವಿಜಯಪುರ, : ಆದರ್ಶ ಸಮಾಜದ ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ನೀಡಿದವರು ಮಹರ್ಷಿ ವಾಲ್ಮೀಕಿಯವರು. ಆದರೆ ಅವರನ್ನು, ಒಂದು ಜಾತಿಗೆ ಕಟ್ಟಿ ಹಾಕುವ ಬೆಳವಣಿಗೆಗಳು ಅತ್ಯಂತ ವಿಷಾದಕರ. ವಾಲ್ಮೀಕಿ ಸೇರಿದಂತೆ ಯಾವುದೇ ಮಹಾನ್ ವ್ಯಕ್ತಿಗಳನ್ನು ಒಂದು ಜಾತಿಗೆ ಕಟ್ಟಿ ಹಾಕಬಾರದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಮೇಶ ಕೋಳಕೂರ ಹೇಳಿದರು.
ಮಂಗಳವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ಜಾತಿಯ ಹೆಸರಿನಲ್ಲಿ ಬೆಳೆದವರಲ್ಲ. ಸ್ವ ಸಾಮಥ್ರ್ಯದಿಂದ ಬೆಳೆದವರು. ಅವರ ಜೀವನದಲ್ಲಿ ನಡೆದ ಸಣ್ಣ ಘಟನೆಯೊಂದು ಪರಿವರ್ತನೆಗೆ ಕಾರಣವಾಗಿ, ಕ್ರೂರಿಯಾಗಿದ್ದ ಅವರು ಕರುಣಾಮಯಿಯಾಗಿ ಪರಿವರ್ತನೆಯ ಮೂಲಕ ಆದರ್ಶ ನೈತಿಕ ಸಮಾಜದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದರು. ವಾಲ್ಮೀಕಿ ರಾಮಾಯಣ ಮಹಾಕಾವ್ಯ ರಚಿಸಿದರು. ಆ ಮಹಾಕಾವ್ಯದ ಮೂಲಕ ಜಗತ್ತಿನ ಮಾನವ ಕುಲಕ್ಕೆ ನೈತಿಕ ಮೌಲ್ಯಗಳನ್ನು ಆದರ್ಶ ನಡಾವಳಿಗಳನ್ನು ನೀಡಿದರು. ಮನುಕುಲದ ಕಲ್ಯಾಣಕ್ಕಾಗಿ ರಾಮರಾಜ್ಯದ ಕಲ್ಪನೆಯನ್ನು ಜಗತ್ತಿಗೆ ನೀಡಿದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.
ವಾಲ್ಮೀಕಿಯ ಆದರ್ಶಗಳ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಬೇಕಾಗಿದ್ದ ನಾವು, ಜಾತಿಗೊಂದು ಮಠಗಳ ನಿರ್ಮಾಣ, ಅಧಿಕಾರದ ಹಪಾಹಪಿತನ, ಜಾತಿಗಳ ದುರ್ಬಳಕೆ, ಅಪ್ರಮಾಣಿಕತೆ, ಮಾಧ್ಯಮಗಳಲ್ಲಿ ಪ್ರಚಾರದ ಗೀಳಿನಿಂದ ಸಾಮಾಜಿಕ ಮೌಲ್ಯಗಳನ್ನು ಮರೆಯುತಿದ್ದೇವೆ. ಕೇವಲ ಹಕ್ಕುಗಳನ್ನು ಮಾತ್ರ ನಾವು ಕೇಳಿದರೆ ಸಾಲದು. ಕರ್ತವ್ಯಗಳನ್ನು ಪಾಲಿಸಬೇಕು. ರಾಮಾಯಣದ ಶಬರಿಯಂತೆ ತಾಳ್ಮೆ ಗುಣ, ಹಣುಮಂತನ ನಿಷ್ಠೆ, ರಾಮನ ಆದರ್ಶಗಳು ಲಕ್ಷ್ಮಣನ ಸಹೋದರತ್ವದ ಗುಣಗಳನ್ನು ಅಳವಡಿಸಿಕೊಂಡು ಪರಿವರ್ತನೆಯ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಲು ಕರೆ ನೀಡಿದರು.
ಪ್ರೊ.ಮಹಾದೇವ ರೆಬಿನಾಳ ಅವರು ವಿಶೇಷ ಉಪನ್ಯಾಸ ನೀಡಿ, ವಾಲ್ಮೀಕಿ ಮೌಲ್ಯಗಳು ಇಂದಿಗೂ ದಾರಿದೀಪವಾಗಿವೆ. ಕೇವಲ ಭಾರತೀಯ ಸಮುದಾಯವಲ್ಲದೇ ಜಗತ್ತಿನ ಎಲ್ಲ ಸಮುದಾಯಗಳಿಗೂ ರಾಮಾಯಣ ಆದರ್ಶವಾಗಿದೆ. ರಾಮಾಯಣ ಕಾವ್ಯ, ಬದುಕಿಗೆ ಹೊಸ ಅರ್ಥಗಳನ್ನು ಕಲ್ಪಿಸುತ್ತದೆ. ಹಾಗೂ ಬದುಕಿಗೆ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಭವನ ನಿರ್ಮಾಣ : ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ: ಮಕ್ಬೂಲ್ ಬಾಗವಾನ್ ಅವರು ಮಾತನಾಡಿ, ರಾಮನ ಆದರ್ಶ, ಹನುಮಂತನ ನಿಷ್ಠೆ, ಲಕ್ಷ್ಮಣನ ಸಹೋದರತ್ವ ಗುಣಗಳು ಒಳಗೊಂಡಂತೆ ವಾಲ್ಮೀಕಿ ರಚಿತ ರಾಮಾಯಣ ಕೃತಿಯಲ್ಲಿ ಬರುವ ಪಾತ್ರಗಳು ನಮ್ಮ ಬದುಕನ್ನು ಕಟ್ಟಿಕೊಳ್ಳಲು ಆದರ್ಶಪ್ರಾಯವಾಗಿವೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ಸಂದೇಶವನ್ನು ವಾಚಿಸಲಾಯಿತು. ಕೆಬಿಜೆಎನ್‍ಎಲ್ ವತಿಯಿಂದ ವಿವಿಧ ಗ್ರಾಮಗಳಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದೆಂದು ಸಚಿವರ ಸಂದೇಶದಲ್ಲಿ ಪ್ರಸ್ತಾಪಿಸಲಾಯಿತು.
ಸಮಾರಂಭದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಶ್ರೀಮತಿ ಸಂಗೀತಾ ಪೋಳ, ಜಿ.ಪಂ. ಉಪಾಧ್ಯಕ್ಷ ನಿಂಗನಗೌಡ ಪಾಟೀಲ, ತಾ.ಪಂ. ಅಧ್ಯಕ್ಷೆ ಶ್ರೀಮತಿ ಸುಜಾತಾ ಗಾಂಜೆನ್ನವರ, ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷ ಮರಳಸಿದ್ದಪ್ಪ ನಾಯ್ಕೋಡಿ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಬಿ.ಎಸ್.ಗಸ್ತಿ, ಮಲ್ಲಿಕಾರ್ಜುನ ಹುಟಗಿ, ಶಿವಾನಂದ ಪಟ್ಟೇದ, ಅಡಿವೆಪ್ಪ ಸಾಲಗಲ್, ಎಂ.ಬಿ.ಕೌಲಗಿ, ಬಾಳಾಸಾಹೇಬ ಹಂಚಿನಾಳ, ಭೀಮಪ್ಪ ಬಿಸನಾಳ, ಮಹಾದೇವ ರಾವುಜಿ, ಎಂ.ಎಂ.ಗೌಡರ, ಕೆ.ಪಿ.ಅಂಕಲಗಿ, ಮಹಾನಗರ ಪಾಲಿಕೆ ಆಯುಕ್ತ ಎಸ್.ಜಿ.ರಾಜಶೇಖರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ಉಪಸ್ಥಿತರಿದ್ದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕಿ ಶ್ರೀಮತಿ ಎನ್.ಎಸ್.ಭೂಸಗೊಂಡ ವಂದಿಸಿದರು. ರಾಜಶೇಖರ ನಿರೂಪಿಸಿದರು.
ಮೆರವಣಿಗೆ : ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

loading...

LEAVE A REPLY

Please enter your comment!
Please enter your name here