ಮಹಾದಾಯಿ ಕಣ್ಣೀರಿನ ಕಿಚ್ಚಿಗೆ ಸ್ತಬ್ಧವಾದ ಬೆಳಗಾವಿ

0
39

ಕೇಂದ್ರ, ರಾಜ್ಯ ಸರಕಾರದ ವಿರುದ್ಧ ರೈತರ ಆಕ್ರೋಶ – ಬಂದ್‍ಗೆ ಕನ್ನಡ ಸಂಘಟನೆಗಳ ಸಾಥ್
ಬೆಳಗಾವಿ:28 ಮಹಾದಾಯಿ ನದಿ ನೀರು ಹಂಚಿಕೆ ಕುರಿತಾಗಿ ಕರ್ನಾಟಕ ಸರಕಾರ ಸುಪ್ರೀ ಕೋರ್ಟನಲ್ಲಿ ಸಲ್ಲಿಸಿದ ಮಧ್ಯಂತರ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಗುರುವಾರ ಬೆಳಗಾವಿ ಜಿಲ್ಲೆಯಾದ್ಯಂತ ರೈತ ಸಂಘಟನೆಗಳು ಕರೆ ನೀಡಿದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ನಗರದ ಚನ್ನಮ್ಮ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ರೈತ ಮುಖಂಡರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಟೈಯರಗೆ ಬೆಂಕಿ ಹತ್ತಿ ಕೇಂದ್ರ ಮತ್ತು ರಾಜ್ಯ ಸರಕಾರರ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ನಗರದ ವಿವಿಧ ಕಡೆಗಳಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‍ಗಳನ್ನು ತಡೆಹಿಡಿದು ಶನಿವಾರ ಕೂಟದವರಗೆ ಪ್ರತಿಭಟನೆ ನಡೆಸುತ್ತ ಅಂಗಡಿಮುಗ್ಗಟುಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದರು. ನಂತರ ಪೊಲೀಸರು ಅವರನ್ನು ಬಂಧಿಸಿ ಬಿಡುಗಡೆಗೊಳಿಸಿದರೂ ಮತ್ತೇ ಕರ್ನಾಟಕ ಸಿಂಹ ಘರ್ಜನೆಯ ಕಾರ್ಯಕರ್ತರು ಸುವರ್ಣ ವಿಧಾನ ಸೌಧದ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವ್ಯಕ್ತಪಡಿಸಿದರು.
ಕರ್ನಾಟಕ ನವ ನಿರ್ಮಾಣಪಡೆಯ ಕಾರ್ಯಕರ್ತರು ನ್ಯೂ ಗಾಂಧಿ ನಗರ ಸಮಿಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈಯರ್‍ಗಳಿಗೆ ಬೆಂಕಿ ಹಚ್ಚಿ ಸುಮಾರು 20ಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಲು ಮುಂದಾದ ಸಂದರ್ಭದಲ್ಲಿ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಜಿಲ್ಲೆಯ ಬೈಲಹೊಂಗಲ, ರಾಮದುರ್ಗ, ಯರಗಟ್ಟಿ, ಮುನವಳ್ಳಿ, ಸವದತ್ತಿ, ಅಥಣಿ, ರಾಯಬಾಗ, ಚಿಕ್ಕೋಡಿ ತಾಲೂಕಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಹಸಿರು ಸೇನೆ, ಭಾರತೀಯ ಕೃಷಿಕ ಸಮಾಜದ ರೈತ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ಮುಖ್ಯ ರಸ್ತೆಗಳಲ್ಲಿ ಟೈಯರ್‍ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ರೈತರು ನಗರ, ಪಟ್ಟಣ ಪ್ರದೇಶಗಳ ಪ್ರಮುಖ ವೃತ್ತದಲ್ಲಿ ಧರಣಿ ಕುಳಿತು ಸಿಟ್ಟು ಹೊರಹಾಕಿದರು. ಇಲ್ಲಿನ ಸುವರ್ಣ ಸೌಧದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ತಡೆಗೆ ಮುಂದಾದ ಕನ್ನಡ ಪರ ಸಂಘಟನೆಗಳ ಸುಮಾರು 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೆÇಲೀಸ್‍ರು ಬಂಸಿ, ಸಂಜೆ ಬಿಡುಗಡೆ ಮಾಡಿದರು. ಇದೇ ವೇಳೆ ಕೆಲ ಕಾರ್ಯಕರ್ತರು ಇಲ್ಲಿನ ರೈಲ್ವೆ ನಿಲ್ದಾಣದ ಬಳಿ ಹೈದರಬಾದ್ ಎಕ್ಸಪ್ರೆಸ್ ರೈಲು ತಡೆಯಲು ಯತ್ನಿಸಿದ ಘಟನೆಯೂ ನಡೆಯಿತು.
ಮಹಾದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ 28 ಸಂಸದರು ಗೋವಾದ 2 ಸಂಸದರಿಗೆ ಹೇದರಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮಾನವಿಯತೆ ದೃಷ್ಠಿಯಿಂದ ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಧೀಕರಣದ ಹೊರಡೆ ಮುಗಿಸಬೇಕಿದ್ದ ವಿಷಯವನ್ನು ವಿನಾಕಾರಣ ಕರ್ನಾಟಕ ಕಾಂಗ್ರೆಸ್ ಸರಕಾರ ಸುಪ್ರೀಂ ಕೋರ್ಟನಲ್ಲಿ ಮಧ್ಯಂತರ ಅರ್ಜಿ ಹಾಕಿ ದಾವೆಯಲ್ಲಿ ಅರ್ಜಿ ತಿರಸ್ಕøತಗೊಳ್ಳುವಂತೆ ಮಾಡಿ ಇಡೀ ಉತ್ತರ ಕರ್ನಾಟಕದ ಜನತೆಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನ್ಯಾಯಾಧೀಕರಣದ ಹೊರಗಡೆ ಬಗೆ ಹರಿಸುವಂತೆ ಹಲವು ಬಾರಿ ಸಂಸದರ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡರೂ ನ್ಯಾಯಾಧಿಕರಣದಲ್ಲಿ ಸೋಲುವ ಪರಿಸ್ಥಿತಿ ಎದುರಾಯಿತು ಎಂದು ಆರೋಪಿಸಿದರು.
****
ನಮ್ಮ ರಾಜ್ಯದ ಜನಪ್ರತಿನಿದಿಗಳ ಇಚ್ಛಾಶಕ್ತಿ ಕೊರತೆಯಿಂದ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾದಾಯಿ ಮಧ್ಯಂತರ ಅರ್ಜಿ ವಜಾಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಬರುವ ದಿನಗಳಲ್ಲಿ ಉಘ್ರವಾದ ಹೋರಾಟ ಮಾಡುವ ಮುಖಾಂತರ ಎರಡು ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು.
ಬಸವರಾಜ ಮಳಲಿ
ರೈತ ಮುಖಂಡ
*******
ರಾಜ್ಯದ ತುಂಬ ಮಹಾದಾಯಿ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಪೊಲೀಸರನ್ನು ಮುಂದಿಟ್ಟು ಕೆಲವು ಕಡೆಗಳಲ್ಲಿ ಲಾಠಿ ಪ್ರಹಾರ ಮಾಡಿರುವುದು ಖಂಡನೀಯ. ಕುಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಪಾಲರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಬೇಕು.
ಲಿಂಗರಾಜ ಪಾಟೀಲ
******
ನಿನ್ನಿ ಮಟಾ ಚಲೋ ಇದ್ದಿ ಅಲ್ಲೋ ಮೋದಿ.. ಸಿದ್ದಣ್ಣ…
ನಿನ್ನೆ ಯ್ಯಾಡ್ ಗಂಟೆ ಮಟಾ ಚಲೋ ಇದ್ದಿ ಅಲ್ಲೋ ಮೋದಿ, ಬೆಳಗಾವಿಗೆ ಬಂದ್ ಒಂದೋದ ತಾಸ್ ಭಾಷಣಾ ಮಾಡಿದ್ದಿ ಅಲ್ಲೋ ಮೋದಿ.. ಮೊನ್ನೆರ್ ಅಮೇರಿಕಾಕ್ ಹೋಗಿ ಬಂದಿಲ್ಲೋ ಮೋದಿ, ಮಗನ್ ನೋಡಾಕ್ ಹೊರ ದೇಶಕ್ಕ ಹೋಗ್ಯಾನೋ ಸಿದ್ದಣ್ಣ ಇಬ್ಬರೂ ಸೇರಿ ರೈತರಿಗೆ ಒಂದ ಹನಿ ನೀರ ಸಿಗದಂಗ್ ಮಾಡಿದ್ರ್ಯಲೋ.. ಈಗ ಸತ್ತ ಹೆಣಾ ಆಗಿ ಮಲಗಿರಲೋ… ಇದು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಯ ಮುಖಂಡರು ಪ್ರಧಾನಿ ಮೋದಿ ಹಾಗೂ ರಾಜ್ಯದ 28 ಸಂಸದರ ಅಣುಕು ಶವದ ಮುಂದೆ ರೋಧಿಸುತ್ತಿದ್ದರು.
****
ಸಂಸದರ ಮನೆಗೆ ಮುತ್ತಿಗೆ ಹಾಕಿದ ಕನ್ನಡ ಸಂಘಟನೆಗಳು:
ರಸ್ತೆಯಲ್ಲಿ ಮಧ್ಯಾಹ್ನದವರೆಗೆ ಮಹಾದಾಯಿ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸಂಸದರು ಮಾತ್ರ ಬಾರದ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಯ ಕಾರ್ಯಕರ್ತರು ಸಂಸದ ಸುರೇಶ ಅಂಗಡಿ ಅವರ ಮನೆಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.

loading...

LEAVE A REPLY

Please enter your comment!
Please enter your name here