ಮಹಾವೀರ ಜಯಂತಿ ಮನೆಯಲ್ಲಿ ಆಚರಿಸಿ: ಪ್ರಜ್ಞಾಸಾಗರ ಮುನಿ ಮನವಿ

0
15

ಮಹಾವೀರ ಜಯಂತಿ ಮನೆಯಲ್ಲಿ ಆಚರಿಸಿ: ಪ್ರಜ್ಞಾಸಾಗರ ಮುನಿ ಮನವಿ
ಬೆಳಗಾವಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರತಿ ಬಾರಿ ಏಪ್ರಿಲ್ ೬ ರಂದು ಸಾರ್ವಜನಿಕವಾಗಿ ನಡೆಯುವ ಭಗವಾನ ಶ್ರೀ ಮಹಾವೀರ ಜಯಂತಿಯನ್ನು ಈ ಬಾರಿ ಕೈಬಿಡಲು ಜೈನ ಸಮುದಾಯ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಜಯಂತಿಯನ್ನು ಪ್ರತಿಮನೆಯಲ್ಲಿ ವಿಜೃಂಭಣೆಯಿAದ ಮತ್ತು ಭಕ್ತಿಪೂರ್ವಕವಾಗಿ ಆಚರಿಸುವಂತೆ ಶ್ರೀ ಪ್ರಜ್ಞಾಸಾಗರ ಮುನಿ ಮಹಾರಾಜ ರಾಜ್ಯದ ಜೈನ ಬಾಂಧವರಿಗೆ ಕರೆ ನೀಡಿದ್ದಾರೆ.
ಇಂದೋರ ಸೇರಿದಂತೆ ಮಧ್ಯಪ್ರದೇಶದ ಬಹುತೇಕ ಕಡೆ ಜೈನ ಬಾಂಧವರು ಶ್ರೀ ಪ್ರಜ್ಞಾಸಾಗರ ಮುನಿ ಮಹಾರಾಜರ ಸಲಹೆಯನ್ನು ಸ್ವಯಂಸ್ಫೂರ್ತಿಯಿAದ ಪಾಲಿಸಲು ಮುಂದಾಗಿದ್ದಾರೆ.
ಕಳೆದ ಕೆಲವು ತಿಂಗಳಿAದ ಶ್ರೀ ಪ್ರಜ್ಞಾಸಾಗರ ಮುನಿಗಳು ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದಲ್ಲಿ ವಾಸವಿದ್ದು, ಆಚಾರ್ಯ ಶ್ರೀ ಶಾಂತಿಸಾಗರ ಮಾಹಾರಾಜರ ಸ್ಮಾರಕ (ಶಾಂತಿಸಾಗರA ತೀರ್ಥ)ದ ಜೀರ್ಣೋದ್ಧಾರದ ಕಾರ್ಯದಲ್ಲಿ ತೊಡಗಿದ್ದಾರೆ.
ಈ ತಿಂಗಳ ೨೭ ರಿಂದ ಭೋಜ ಗ್ರಾಮದಲ್ಲಿ ಆರಂಭಗೊಳ್ಳಬೇಕಿದ್ದ ಆದರ್ಶ ಪಂಚಕಲ್ಯಾಣ ಮಹೋತ್ಸವ ಮತ್ತು ಶ್ರೀ ಶಾಂತಿಸಾಗರ ಮಹಾರಾಜರ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಸಮಾರಂಭವು, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

loading...