ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ

0
34

ಕನ್ನಡಮ್ಮ ಸುದ್ದಿ-ಮುಂಡಗೋಡ : ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಪಟ್ಟಣದ ಈಶ್ವರ, ಬಸವಣ್ಣ ದೇವಾಲಯ, ಸೇರಿದಂತೆ ತಾಲೂಕಿನ ಪ್ರತಿಷ್ಟಿತ ಪಾರ್ವತಿ ಪರಮೇಶ್ವರ, ಬೆಡಸಗಾಂವ ಶ್ರೀ ರಾಮಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು.
ಪಟ್ಟಣದ ಹೊರವಲಯ ದಟ್ಟ ಅರಣ್ಯದ ನಡುವೆ ಇರುವ ಪ್ರತಿಷ್ಟಿತ ಪಾರ್ವತಿ ಪರಮೇಶ್ವರ ದೇವಾಲಯಕ್ಕೆ ಬೆಳಗಿನಿಂದಲೇ ಏಕಾದಶಿ ನಿಮಿತ್ತ ಭಕ್ತಾಧಿಗಳೆಲ್ಲ ಉಪವಾಸ ವೃತ ಕೈಗೊಂಡು ದಂಡು ದಂಡಾಗಿ ತೆರಳಿ ಪೂಜೆ ಸಲ್ಲಿಸಿದರು. ಪಟ್ಟಣದಿಂದ ಸುಮಾರು 3 ಕಿ.ಮೀ ದೂರವಿರುವ ಈ ದೇವಾಲಯಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಸಂಪ್ರದಾಯದಂತೆ ಪಾದಯಾತ್ರೆ ಮೂಲಕ ತೆರಳಿ ಹಣ್ಣು ಕಾಯಿ, ಪಂಚಾಮೃತ, ಎಣ್ಣೆ, ಹರಕೆ ಮುಂತಾದ ಸೇವೆ ಸಮರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು. ಪಟ್ಟಣದಿಂದ ದೇವಾಲಯದವರೆಗೆ ರಸ್ತೆಯುದ್ದಕ್ಕೂ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಕಾಲ್ನಡಿಗೆಯೊಂದಿಗೆ ಸಾಲು ಸಾಲಾಗಿ ತೆರಳುತ್ತಿದ್ದ ದೃಶ್ಯಗಳು ಕಂಡು ಬಂತು.

loading...