ಮಹಿಳಾ ಆಯೋಗಕ್ಕೆ ಬರೆದ ದೂರಿನ ಪತ್ರ ಪ್ರದರ್ಶನ

0
4

 

ಕುಮಟಾ: ತಾಲೂಕಿನ ಅರಣ್ಯ ಅತಿಕ್ರಮಣದಾಳಾದ ಗೀತಾ ನಾಯ್ಕ ಅವಳಿಗೆ ಶಿರಸಿ ವಲಯ ಅರಣ್ಯಾಧಿಕಾರಿ ನೀಡಿದ ಕಿರುಕುಳ, ಮಾನಸಿಕ ಹಿಂಸೆ, ಕಾನೂನು ಬಾಹೀರವಾಗಿ ಎಸಗಿದ ದೌರ್ಜನ್ಯದ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಾಲೂಕು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ತಿಳಿಸಿದ್ದಾರೆ.
ಅವರು ಮಂಗಳವಾರ ಅತಿಕ್ರಮಣದಾರರೊಂದಿಗೆ ರಾಜ್ಯ ಮಹಿಳಾ ಆಯೋಗಕ್ಕೆ ಬರೆದ ದೂರಿನ ಪತ್ರವನ್ನು ಮಿರ್ಜಾನನಲ್ಲಿ ಪತ್ರಕರ್ತರಿಗೆ ಪ್ರದರ್ಶಿಸಿ, ಮಾತನಾಡಿ, ಸೂಕ್ತ ಭದ್ರತೆ ನೀಡದೇ ಸಾಕಷ್ಟು ಮಹಿಳಾ ಸಿಬ್ಬಂದಿಗಳನ್ನು ನಿಯೋಜಿಸದೇ, ಮಧ್ಯಾನ್ಹ ಊಟ ನೀರು, ಆಹಾರ ನೀಡದೇ ೭ ರಿಂದ ೮ ತಾಸು ಏಕಾಂಗಿಯಾಗಿ ಮೂಲಭೂತ ವ್ಯವಸ್ಥೆ ಕಲ್ಪಿಸದೇ ದೈಹಿಕ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಯೋಗಕ್ಕೆ ಬರೆದ ಮನವಿಯಲ್ಲಿ ಪ್ರಸ್ತಾಪಿಸಿದರು.

ವಿಧವೆಯಾಗಿರುವ ಈ ಮಹಿಳೆಗೆ ನೀಡಿರುವ ಕಿರುಕುಳ ದೌರ್ಜನ್ಯವು ಆಘಾತಕರ ಹಾಗೂ ವಿಷಾದಕರ ಸಂಗತಿ. ಹೋರಾಟಗಾರರ ವೇದಿಕೆಯು ಇದನ್ನು ಬಲವಾಗಿ ಖಂಡಿಸುತ್ತದೆ. ಇಂಥಹ ಪ್ರಕರಣಗಳು ಮರುಕಳಿಸದೇ ಪುನರಾವರ್ತನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಉಲ್ಲೆÃಖಿಸಿದ್ದಾರೆ.

loading...