ಮಹಿಳೆಯರು ಹೋರಾಟ ಮನೋಭಾವ ರೂಢಿಸಿಕೊಳ್ಳಲಿ: ಶಾಸಕ ಪಾಟೀಲ

0
56

ಮುದ್ದೇಬಿಹಾಳ : ಕೆಲವು ಸಮಾಜಬಾಹಿರ ವ್ಯಕ್ತಿಗಳು ಹೊಂದಿರುವ ಮನಸ್ಥಿತಿಯನ್ನು ಎದುರಿಸಲು ಮಹಿಳೆಯರು ಮಾನಸಿಕವಾಗಿ ಸಧೃಢರಾಗಿ ಹೋರಾಟ ಮಾಡಬೇಕು ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಬಸರಕೋಡ ಗ್ರಾಮದಲ್ಲಿ ಭಾನುವಾರ ಎ.ಎಸ್‌.ಪಾಟೀಲ ನಡಹಳ್ಳಿ ಪರಿವಾರ ಹಾಗೂ ಪವಾಡ ಬಸವೇಶ್ವರ ದೇವಸ್ಥಾನ ಕಮಿಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಪ್ರತಿಯೊಂದು ರಂಗದಲ್ಲೂ ಮಹಿಳೆ ಕಾಲಿಟ್ಟಿದ್ದಾಳೆ.ಕೆಲಸ ಮಾಡುವ ಸಾಮರ್ಥ್ಯ,ಸಹನಶೀಲತೆ ಹಾಗೂ ಧೈರ್ಯದ ಮನೋಭಾವಗಳು ಸ್ಫೂರ್ತಿಯಾಗಿವೆ.ಸ್ವಾವಲಂಬನೆಗೆ ಸಾಕಷ್ಟು ಕೆಲಸಗಳಿದ್ದು ಅವುಗಳನ್ನು ನಿರ್ವಹಿಸಿದರೆ ಮುನ್ನೆಲೆಗೆ ಬರಲು ಸಾಧ್ಯವಿದೆ ಎಂದರು.
ಚಾಮರಾಜನಗರ ನಲಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿದತ್ತ ಬಂತೇಜಿ ಮಾತನಾಡಿ, ಸಾಮೂಹಿಕ ವಿವಾಹಗಳಲ್ಲಿ ಬಡವರಷ್ಟೇ ಮದುವೆಯಾಗುತ್ತಾರೆ.ಅವರಿಗಷ್ಟೇ ಸಿಮೀತ ಎಂಬ ಭಾವನೆ ದೂರವಾಗಬೇಕು.ಉಳ್ಳವರು ತಮ್ಮ ಮದುವೆಯ ಖರ್ಚುಗಳನ್ನು ಬಡವರಿಗಾಗಿ ಮೀಸಲಿಟ್ಟರೆ ಸಾಮಾಜಿಕ ಸಮಾನತೆಯ ಸಂದೇಶ ಬಿತ್ತಿದಂತಾಗುತ್ತದೆ ಎಂದರು. ಪವಾಡ ಬಸವೇಶ್ವರ ಆಶ್ರಮದ ಬಸಪ್ಪ ಶರಣರು ಸಾನಿಧ್ಯ ವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಪವಾಡ ಬಸವೇಶ್ವರ ಸಂಸ್ಥೆಯ ಅಧ್ಯಕ್ಷ ಕೆ.ವಾಯ್‌.ಬಿರಾದಾರ, ಚನ್ನೂರಿನ ಕೃಷಿ ಪಂಡಿತ ಸಿದ್ದನಗೌಡ ಪಾಟೀಲ, ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ, ಗಂಗಣ್ಣ ಬಿರಾದಾರ, ಸಂಗನಗೌಡ ಪಾಟೀಲ, ಗಂಗಮ್ಮ ಪಾಟೀಲ,ಬಿ.ಜಿ.ಸಜ್ಜನ, ಚಂದ್ರಶೇಖರ ಮೇಟಿ, ಕರಬಸಯ್ಯ ಹಿರೇಮಠ, ತಿಪ್ಪಣ್ಣ ಯಾಳವಾರ, ಸಂಗಪ್ಪ ಮಂಕಣಿ, ಸಂಗಯ್ಯ ಸಾರಂಗಮಠ, ಆನಂದ ಹೊಳಿ ಮತ್ತಿತರರು ಇದ್ದರು. ಗುರುನಾಥಗೌಡ ಬಿರಾದಾರ ನಿರೂಪಿಸಿದರು.

loading...