ಮಹಿಳೆಯರ ಸಬಲೀಕರಣಕ್ಕೆ ಪೂರಕವಾದ ಕಾರ್ಯಕ್ರಮ ಆಯೋಹಿಸುವುದು ಸೂಕ್ತ

0
33

ಕನ್ನಡಮ್ಮ ಸುದ್ದಿ-ಧಾರವಾಡ : ಮಹಿಳೆಯರ ಸಶಕ್ತೀಕರಣಕ್ಕೆ ಹಾಗೂ ಮಹಿಳೆಯರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಇಂಥ ಸಂಘ-ಸಂಸ್ಥೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಸ್ನೇಹಲ್ ಆರ್. ಹೇಳಿದರು.
ರೋಟರಿ ಕ್ಲಬ್ ಆಫ್ ಸೆವನ್ ಹಿಲ್ಸ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಸಿಡಿ ಮೈದಾನದಿಂದ ಆರಂಭವಾದ (ಮಹಿಳಾ ಸಬಲೀಕರಣ, ಬದಲಾವಣೆಯೇಡೆಗೆ ದಿಟ್ಟ ಹೆಜ್ಜೆ ಎಂಬ ಧ್ಯೇಯ ವಾಕ್ಯದ) ವಾಕ್‍ಥಾನ್‍ಗೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದು, ತಾವು ಸಹ ಪುರುಷರಷ್ಟೆ ಸಭಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಹಿಳೆಯರಿಗೆ ಇಂದು ಎಲ್ಲಾ ರಂಗಗಳಲ್ಲಿ ಕಾರ್ಯನಿರ್ವಹಿಸಲು ಸಮಾನ ಅವಕಾಶ ನೀಡಲಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ರೋಟರಿ ಕ್ಲಬ್‍ನ ಸದಸ್ಯೆಯರು ತಮ್ಮ ಕುಟುಂಬ ಹಾಗೂ ವೃತ್ತಿಯನ್ನು(ಕೆಲಸ) ನಿರ್ವಹಿಸುವ ಜತೆಗೆ ಮಹಿಳೆಯರ ಸಭಲೀಕರಣಕ್ಕೆ ಮ್ಯಾರಾಥಾನ್ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನ್ಯಾಯವಾದಿ ನಂದಾ ಮಾಳವಾಡ ಮಾತನಾಡಿ, ಮಹಿಳೆಯರ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಧಾರವಾಡ ರೋಟರಿ ಸೇವೆನ್ ಹಿಲ್ಸ್ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಒಂದು ಮಾಧರಿ ಸಂಸ್ಥೆಯಾಗಿದೆ. ಪ್ರತಿಯೊಬ್ಬರು ಮಹಿಳೆಯರ ಸಬಲೀಕರಣಕ್ಕೆ ಕೈಜೋಡಿಸಬೇಕು. ಸಮಾಜದಲ್ಲಿ ಮಹಿಳೆಯರು ಹಾಗೂ ಪುರುಷರು ಎಂಬ ಬೇಧವನ್ನು ನಿವಾರಿಸುವ ನಿಟ್ಟಿನಲ್ಲಿ ಇಂಥ ಜಾಗೃತಿ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಮಹಿಳೆಯರು ತಮ್ಮ ಏಳ್ಗೆಗೆ ಒಟ್ಟಾಗಿ ಶ್ರಮಿಸಬೇಕು ಎಂದರು.
ಕ್ಲಬ್‍ನ ಸದಸ್ಯೆಯರಾದ ಡಾ.ಪೂರ್ಣಿಮಾ ಜಿ., ಡಾ.ನಾಗರತ್ನಾ ಆರ್., ಡಾ.ಪಲ್ಲವಿ ದೇಶಪಾಂಡೆ, ಡಾ.ಗೌರಿ ತಾವರಗೇರಿ, ಸುಷ್ಮಾ ಭಟ್, ಡಾ. ಲತಾ ಪೂಜಾರ, ರೇಖಾ ಗುಪ್ತಾ, ಡಾ.ಸಾಧನಾ ಕುಲ್ಲೊಳ್ಳಿ, ರೇಣುಕಾ ಸಾಳುಂಕಿ, ಸುಮಂಗಲಾ ಭಟ್, ಡಾ. ಸಂಜೀವ್ ಕುಲಕರ್ಣಿ, ಕಿರಣ ಹಿರೇಮಠ ಉಪಸ್ಥಿತರಿದ್ದರು.

loading...