ಮಹಿಳೆಯ ಕೊರಳಿನಿಂದ ಮಾಂಗಲ್ಯಸೂತ್ರ ಅಪಹರಣ

0
11

ಧಾರವಾಡ : 01 ಬೈಕ್ ಮೇಲೆ ಬಂದ ಕಳ್ಳರಿಬ್ಬರು ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶಹರದ ಉಳವಿ ಚನ್ನಬಸವೇಶ್ವರನಗರದ ಗಾರ್ಡನ ಬಳಿ ಕಳೆದ ಸಂಜೆ ಜರುಗಿದೆ.
ಶೈಲಾ ಗಣೇಶ ಹೆಗಡೆ (55) ಎಂಬುವವರು ಬ್ಯಾಂಕಿನ ಕೆಲಸಕ್ಕೆಂದು ಮನೆಯಿಂದ ಹೊರಟಾಗ ಈ ಘಟನೆ ನಡೆದಿದೆ. ರಸ್ತೆ ಬದಿ ಹೋಗುವಾಗ ಎದುರಿನಿಂದ ಬೈಕ ಮೇಲಿಂದ ಬಂದ ಕಳ್ಳರಿಬ್ಬರು ಅಂದಾಜು 82 ಸಾವಿರ ಮೌಲ್ಯದ 35 ಗ್ರಾಂ ಮಾಂಗಲ್ಯಸೂತ್ರವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here