ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನ ಆಚರಣೆ

0
34

ಯಲಬುರ್ಗಾ: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ. ದೇವೆಗೌಡರ ಆದರ್ಶಗಳನ್ನು ನಾವು ಪಾಲಿಸಬೇಕಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಅಂದಾನಗೌಡ ಪೋಲಿಸಪಾಟೀಲ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಶನಿವಾರ ಮಾಜಿ ಪ್ರಧಾನಿ ದೇವೇಗೌಡರ ೮೭ ಜನ್ಮದಿನ ಆಚರಣೆ ನಿಮಿತ್ಯ ರೋಗಿಗಳಿಗೆ ಹಣ್ಣು-ಹಾಲು ವಿತರಿಸಿ ಅವರು ಮಾತನಾಡಿದರು.

ಕಳೆದ ಐದು ದಶಕಗಳಿಂದ ದೇವೇಗೌಡರು ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿ, ಹಲವಾರು ರಾಜಕಾರಣಿಗಳಿಗೆ ಗುರುಗಳಾಗಿದ್ದಾರೆ. ಅಂದುಕೊಂಡಿದ್ದನ್ನು ಮಾಡಿಯೇ ತಿರುವ ದೇವೇಗೌಡರ ರಾಜಕೀಯ ಸೇವೆ ಅಪಾರ. ತಮ್ಮ ಜೀವನದಲ್ಲಿ ಸ್ನೇಹ, ವಿಶ್ವಾಸ, ನಂಬಿಕೆ,ಅಧಿಕಾರ ಅನುಭವಿಸಿದ ಗೌಡರು ಅದೇ ರೀತಿಯಲ್ಲಿ ಹಲವಾರು ಸೋಲು-ಗೆಲವುಗಳನ್ನು ಕಂಡವರು ಎಂದರು. ರಾಜ್ಯದ ಮುಖ್ಯಮಂತ್ರಿಯಾಗಿ ರೈತರಿಗಾಗಿ ಹಲವು ಜನÀಪರ ಕಾರ್ಯಕ್ರಮ ಯೋಜನೆಗಳನ್ನು ರೂಪಿಸಿದರು. ದೇವೇಗೌಡರು ಇನ್ನು ನೂರು ವರ್ಷಗಳ ಕಾಲ ಬದುಕಲಿ ಎಂದು ಹಾರೈಸಿದರು.
ವೈದ್ಯರಾದ ಡಾ.ಸಂಗನಬಸಪ್ಪ, ಪ್ರಕಾಶ ವಿ, ಶೇಖರ ಭಜೆಂತ್ರಿ, ಎಪಿಎಂಸಿ ಸದಸ್ಯ ಬಸವರಾಜ ಕುಡಗುಂಟಿ ಮುಖಂಡರಾದ ಬಸವರಾಜ ಗುಳಗಳಿ, ಶಿವು ರಾಜೂರು, ಬಸವರಾಜ ಜತ್ತಿ, ಯಲ್ಲಪ್ಪ ಹುನಗುಂದ, ರಮೇಶ ಜೋಗಿನ, ರಮೇಶ ದಂಡಿನ, ಶಿವಯ್ಯ ಹೊಸಳ್ಳಿ, ಇತರರು ಇದ್ದರು.

loading...