ಮಾಜಿ ಸಚಿವ ರಮೇಶ ರಾಜೀನಾಮೆ ನೀಡುವ ಮಾಹಿತಿ ಇಲ್ಲ: ಹೆಬ್ಬಾಳ್ಕರ್

0
35

ಬೆಳಗಾವಿ

ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡುವುದರ ಕುರಿತು ಯಾವುದು ನನಗೆ ಗೋತ್ತಿಲ್ಲ ಅವರು ರಾಜೀನಾಮೆ ನೀಡಿದ ಬಳಿಕ ಮಾತನಾಡುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಮಂಗಳವಾರ ಹಿಂಡಲಗಾ ವಿಜಯನಗರದಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ನೀಡುತ್ತಿರುವ ವಿಷಯ ನನಗೆ ಗೋತ್ತಿಲ್ಲ. ಅವರು ಸದ್ಯ ಕಾಂಗ್ರೆಸ್ ನಲ್ಲಿದ್ದಾರೆ. ಅವರು ರಾಜೀನಾಮೆ ನೀಡಿದ ಬಳಿಕ ಮಾತನಾಡುತ್ತೇನೆ. ರಮೇಶ ಜಾರಕಿಹೊಳಿ ಅವರು ಬಿಜೆಪಿ ಹೊಗುತ್ತಾರೆ ಎಂಬು ಮಾಹಿತಿ ನನಗೆ ಇಲ್ಲ ಅವರು ಹೋಗಲಿ. ನಂತರ ನಮ್ಮ ಪಕ್ಷದ ಪರವಾಗಿ ಅವರ ಬಗ್ಗೆ ಮಾತನಾಡುವುದು ಇದೆ ಎಂದರು.

loading...