ಮಾಜಿ ಸಿಎಂ ಕಂಠಿಯವರ ಪುತ್ಥಳಿಗೆ ಮಾಲಾರ್ಪಣೆ

0
39

ಇಳಕಲ್‌ : ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಎಸ್‌.ಆರ್‌. ಕಂಠಿ ಅವರ 109ನೇ ಜನ್ಮದಿನಾಚರಣೆ ಅಂಗವಾಗಿ ಅವರ ಕಂಚಿನ ಪುತ್ಥಳಿಗೆ ಬಾಗಲಕೋಟ ಜಿಲ್ಲಾ ಪಂಚಾಯತ ಅಧ್ಯಕ್ಷೆ ವೀಣಾ ಕಾಶಪ್ಪನವರ ಬುಧವಾರ ರಂದು ಮಾಲಾರ್ಪಣೆ ಮಾಡಿದರು.

ಲಿಂ.ಎಸ್‌. ಆರ್‌. ಕಂಠಿ ಅವರ 109ನೇ ಜನ್ಮದಿನದ ಅಂಗವಾಗಿ ಇಲ್ಲಿಯ ಕಂಠಿ ವೃತ್ತದಲ್ಲಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಇನ್ನಿತರರು ಮಾಲಾರ್ಪಣೆ ಮಾಡಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷೆ ಜೊತೆಗೆ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ನಿರ್ಧೇಶಕ ಅರುಣ ಬಿಜ್ಜಲ, ಶ್ರೀ ವಿಜಯ ಮಹಾಂತೇಶ ವಿಧ್ಯವರ್ಧಕ ಸಂಘದ ಉಪಾಧ್ಯಕ್ಷ ಮಹೇಶಪ್ಪ ಸಜ್ಜನರ, ಮಹಿಳಾ ಮಹಾವಿಧ್ಯಾಲಯದ ಚೇರಮನ್ನ ವಿರುಪಾಕ್ಷಪ್ಪ ಕಂದಕೂರ, ಆರ್‌. ಪಿ. ಕರಡಿ ಆಸ್ಪತ್ರೆಯ ಚೇರಮನ್ನ ಶರಣಪ್ಪ ಅಕ್ಕಿ ಇತರರು ಉಪಸ್ಥಿತರಿದ್ದರು.

ಹಾಗೇ ನಗರದ ಎಸ್‌.ಆರ್‌. ಕಂಠಿ ಬಾಲಕೀಯರ ಪ್ರೌಢಶಾಲೆಯ ವಿಧ್ಯರ್ಥಿನೀಯರು ಶಿಕ್ಷಕರು ಕಂಠಿ ವೃತ್ತದಲ್ಲಿ ಸೇರಿ ಮುಖ್ಯಗುರು ಕೇಮರಾಜ ವಂದಕುದರಿ, ಶಿಕ್ಷಕರಾದ ಸಂಗಣ ಗದ್ದಿ, ಸದ್ದಲಗಿ ಇನ್ನಿತರ ಶಿಕ್ಷಕರು ಕಂಠಿ ಪುತ್ಥಳಿಗೆ ಮಾಲಾರ್ಪಣೆಮಾಡಿ ನಮನಸಲ್ಲಿಸಿ ಪ್ರಾರ್ಥಿಸಿದರು.

loading...

LEAVE A REPLY

Please enter your comment!
Please enter your name here