ಮಾತಿನ ಬರಾಟೆಯಲ್ಲಿ ಹೇಳಿದ್ದೆನೆ : ಶಾಸಕ ಬಾಲಚಂದ್ರ

0
7

ಬೆಳಗಾವಿ: ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡದಿದ್ದರೆ, ಸರಕಾರವನ್ನೆÃ ಕೆಡುವುತ್ತೆವೆ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಏಳೆದುಕೊಂಡಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ, ನಾನು ಹೇಳಿಲ್ಲವೆಂದು ತೆಪ್ಪೆ ಹಚ್ಚುವ ಕೆಲಸ ಮಾಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶದ ಮೂಡಲಗಿ ತಾಲೂಕಿನ ತಿಗಡಿ ಗ್ರಾಮದಲ್ಲಿ ನಿರಾಶ್ರಿತತ ಕುಟುಂಬಗಳಿಗೆ ಧೈರ್ಯ ತುಂಬುವ ಮಾತಿನ ಭರಾಟೆಯಲ್ಲಿ ನಾನು ಸರಕಾರ ಬಿಳಿಸುವ ಬಗ್ಗೆ ಬಾಯಿ ತಪ್ಪಿ ಹಾಗೆ ಹೇಳಿದ್ದೆ ಹೋರತು. ಸರಕಾರ ಬಿಳಿಸುವ ಯಾವುದೆ ದುರುದೇಶವಿಲ್ಲ ಎಂದು ಹೇಳಿದ್ದಾರೆ.
ಮೈತ್ರಿ ಸರಕಾರವನ್ನು ಬಿಳಿಸುತ್ತೆನೆಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆ ನೀಡುವ ಮೂಲಕ ಕೊನೆಗೂ ದೊಸ್ತಿಗಳ ಸರಕಾವನ್ನು ನೆಲಕಚ್ಚುವಂತೆ ಮಾಡುವಲ್ಲಿ ಯಶಸ್ವಿಯಾದರು. ಈಗ ತಾನೇ ಮೈತ್ರಿ ಸರಕಾರವನ್ನು ಬಿಳಿಸಿ ಸಿಎಂ ಪಟ್ಟ ಏರಿದ ಬಿಜೆಪಿಯ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಗ್ರಿನ್ ಸಿಗ್ನಲ್ ಕಾಯುತ್ತಿದ್ದಾರೆ.
ಪ್ರವಾಹದ ಮಧ್ಯೆಯೇ ಸಚಿವ ಸಂಪುಟ ರಚನೆಗೆ ಕೇಂದ್ರಕ್ಕೂ ತೆರಳುತ್ತಿದ್ದಾರೆ. ೩ ವರ್ಷ ೧೦ ತಿಂಗಳು ಅರ್ಥಪೂರ್ಣವಾಗಿ ಆಡಳಿತ ನಿರ್ವಹಿಸಬೇಕು ಎಂದುಕೊಂಡಿದ್ದಾರೆ. ಸಿಂಗಲ್ ಆರ್ಮಿಯಾಗಿ ಸೆಣಸಾಡುತ್ತಿದ್ದಾರೆ. ಆದರೆ ಸಿಎಂ ಪಟ್ಟ ಹಿಡಿದು ಅಧಿಕಾರ ಹಿಡಿದು ಪುಟ್ ಪುಟ್ ಹೆಜ್ಜೆ ಇಡುವ ಸಂದರ್ಭದಲ್ಲಿ ಬಿಜೆಪಿ ಶಾಸಕರೇ ಈ ರೀತಿ ಹೇಳಿಕೆ ನೀಡಿರುವುದು ರಾಜ್ಯದಲ್ಲಿ ಹೊಸ ವಿವಾದ ಮೈ ಮೇಲೆ ಏಳಿದುಕೊಂಡಿದ್ದಾರೆ. ಅವರ ಹೇಳಿಕೆಯಿಂದ ಬಿಜೆಪಿ ವಲಯದಲ್ಲಿ ಹೊಸ ನಡುಕ ಉಂಟಾಗಿದೆ.
ಉತ್ತರ ಕರ್ನಾಟಕದಾದ್ಯಂತ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿರುವ ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡದಿದ್ದರೆ, ಸರಕಾರನ್ನೆÃ ಕೆಡುವುತ್ತೆನೆ ಹೇಳಿಕೆ ನೀಡಿದ್ದರು. ಆದರೆ ವಿವಾದ ಕಿಚ್ಚು ಹೆಚ್ಚಾದಂತೆ ನಾನು ಹೇಳಿಲ್ಲ ಎಂದು ಹೇಳುವ ಮೂಲಕ ತಪ್ಪೆ ಹಚ್ಚುತ್ತಿದ್ದಾರೆ. ಜನರಿಗೆ ಸಾಂತ್ವನ ಹೇಳುವ ವೇಳಿ ಮಾತಿನ ಬರಾಟೆಯಲ್ಲಿ ಧೈರ್ಯ ತುಂಬುವ ಸಂದರ್ಭದಲ್ಲಿ ಬಾಯಿ ತಪ್ಪಿ ಹೇಳಿದ್ದೆನೆ ಎಂದು ಹೇಳಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಹೇಳಿರುವ ಹೇಳಿಕೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ರಾಜ್ಯಾದ್ಯಂತ ಪುಲ್ ವೈರಲ್ ಆಗುತ್ತಿದೆ. ಇದರಿಂದ ಬಿಜೆಪಿ ನಾಯಕರಲ್ಲಿ ಮತ್ತೆ ನಡುಕ ಉಂಟಾಗಿದೆ. ಸಮರ್ಥನೆ ಮಾಡಿಕೊಂಡಿದ್ದಾರೆ.

loading...