ಮಾದಕ ವಸ್ತುಗಳ ವಿರೋಧಿ ದಿನಾಚರಣೆ

0
18

ಹಾನಗಲ್ಲ: ಜನಸಂಖ್ಯೆ ಹೆಚ್ಚಳವಾದಂತೆ ದೇಶದಲ್ಲಿ ಮಾದಕ ವಸ್ತುಗಳ ಬಳಸುವವರ ಪ್ರಮಾಣ ಅಧಿಕವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ೧೬ ಕೋಟಿ ಜನರು ಮದ್ಯಪಾನ ವ್ಯಸನಕ್ಕೆ ಬಲಿಯಾಗಿದ್ದಾರೆ. ಗಾಂಜಾ, ಡ್ರಗ್ಸ್, ಸಿಗರೇಟ್ ಚಟ ಅಂಟಿಸಿಕೊಂಡವರು ಸುಮಾರು ೪ ಕೋಟಿ ಜನರಿದ್ದಾರೆ ಎಂದು ರೋಶನಿ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರದ ಮುಖ್ಯಸ್ಥೆ ಸಿ.ಡಿಂಪಲ್ ಡಿಸೋಜಾ ಹೇಳಿದರು.
ಅಂತರಾಷ್ಟಿçÃಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ನಿಮಿತ್ತ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಮಾದಕ ವಸ್ತು ವಿರೋಧಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಜಾಗೃತಿ ಜಾಥಾವು ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭಗೊಂಡು ಸರಕಾರಿ ಆಸ್ಪತ್ರೆ ತನಕ ನಡೆಯಿತು. ದುಶ್ಚಟಗಳನ್ನು ತ್ಯಜಿಸುವ, ವ್ಯಸನದ ಅಪಾಯಗಳ ಬಗ್ಗೆ ಘೋಷಣೆ ಕೂಗಲಾಯಿತು. ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು.
ಹಾನಗಲ್ಲ ಠಾಣೆಯ ಸಬ್ ಇನ್ಸ್ಪೆಕ್ಟರ್ ಗುರುರಾಜ ಮೈಲಾರದ ಮಾತನಾಡಿ, ಭವಿಷ್ಯ ರೂಪಿಸುವ ವಿದ್ಯಾರ್ಥಿ ಜೀವನದ ಸಮಯ ಅಮೂಲ್ಯ. ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ, ಸಮಯ ಹಾಳು ಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಉತ್ತಮ ನಾಗರಿಕರಿಂದ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ ಮಠದ ಮಾತನಾಡಿ, ಪ್ಯಾಶನ್, ಅನುಕರಣೆ, ಆಕರ್ಷಣೆಗೆ ಒಳಗಾಗಿ ಯುವ ಸಮೂಹ ದಾರಿ ತಪ್ಪುತ್ತಿದೆ. ವ್ಯಸನಮುಕ್ತರಾಗಿ ಆತ್ಮವಿಶ್ವಾಸದ ಬದುಕಿಗೆ ಕಾಲಿಡಬೇಕು ಎಂದರು.

loading...