ಮಾಧ್ಯಮ ಜಾಹೀರಾತು ರದ್ದುಗೊಳಿಸಿ; ಕೋವಿಡ್ ಪರಿಹಾರಕ್ಕೆ ಹಣ ನೀಡಿ; ಸೋನಿಯಾ ಸಲಹೆ

0
12

ನವದೆಹಲಿ:- ಮಾಧ್ಯಮ ಜಾಹೀರಾತುಗಳು, ಸರ್ಕಾರಿ ಪ್ರತಿನಿಧಿಗಳ ವಿದೇಶಿ ಪ್ರವಾಸವನ್ನು ರದ್ದುಗೊಳಿಸಿ, ಅದರ ಮೊತ್ತವನ್ನು ಕೋವಿಡ್-19 ತಡೆಗೆ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಲಹೆ ನೀಡಿದ್ದಾರೆ.

ಕೋವಿಡ್ ಕುರಿತು ಮೋದಿಗೆ ನಾಲ್ಕನೇ ಪತ್ರ ಬರೆದಿರುವ ಸೋನಿಯಾ ಗಾಂಧಿ, ಕೇಂದ್ರದ ಜಾಹೀರಾತುಗಳನ್ನು ರದ್ದುಗೊಳಿಸಿದಲ್ಲಿ ಉಳಿಯುವ 20 ಸಾವಿರ ರೂ. ಮೊತ್ತವನ್ನು ಕೋವಿಡ್ -19 ಗಾಗಿ ತಯಾರಿಸಿರುವ ಪಿಎಂ- ಕೇರ್ ಗೆ ವರ್ಗಾಯಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ದೇಶದ ಜನರು ಸಾಕಷ್ಟು ವೈಯಕ್ತಿಕ ತ್ಯಾಗಗಳನ್ನು ಮಾಡಿದ್ದಾರೆ. ಅವರು ಜನಪ್ರತಿನಿಧಿಗಳ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಸಂಸತ್ ಸದಸ್ಯರ ಶೇ. 30ರಷ್ಟು ವೇತನ ಕಡಿತಗೊಳಿಸುವ ಸಂಪುಟ ನಿರ್ಧಾರವನ್ನು ಸ್ವಾಗತಿಸಿದ ಸೋನಿಯಾ, ಆ ಹಣವನ್ನು ಸರಿಯಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

loading...