ಮಾನವನಿಗೆ ಸಾಮಾನ್ಯ ಜ್ಞಾನ ಅತ್ಯವಶ್ಯ

0
46

ಗೋಕಾಕ: 30. ಮನುಷ್ಯನ ಜೀವನ ಮಟ್ಟವನ್ನು

ಸುಧಾರಿಸಲು ಹಾಗೂ ಎತ್ತರಕ್ಕೆ ಏರಿಸಲು ಅಕ್ಷರ

ಜ್ಞಾನದೊಂದಿಗೆ ಸಾಮಾನ್ಯ ಜ್ಞಾನವು ಅತಿ ಅವಶ್ಯವಾಗಿದೆ

ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಈರಣ್ಣ

ಕಡಾಡಿ ಹೇಳಿದರು.

ತಾಲೂಕಿನ ಬಳೋಬಾಳ ಗ್ರಾಮದ ಬೆಳವಿ ತೋಟದ

ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ

ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ

ಜಿಲ್ಲಾ ಮಟ್ಟದ ಮುಕ್ತ ಸಾಮಾನ್ಯ ಜ್ಞಾನ ಪರೀಕ್ಷೆ ಹಾಗೂ

ಜಾನಪದ ಗಾಯನ ಸ್ಪರ್ಧೆಗಳ ಉದ್ಘಾಟಿಸಿ ಮಾತನಾಡಿ

ಸಾಮಾನ್ಯ ಜ್ಞಾನ ಪರೀಕ್ಷೆ ನಮ್ಮ ಬುದ್ದಿಮಟ್ಟವನ್ನು

ಇನ್ನೊಬ್ಬರೊಂದಿಗೆ ವರಿಗೆ ಹಚ್ಚುವುದರೊಂದಿಗೆ,

ಸ್ಪರ್ಧಾಭಾವನೆಯನ್ನು ವಿಧ್ಯಾರ್ಥಿಗಳು ಹೆಚ್ಚಿಸಿಕೊಳ್ಳಲಿಕೆ

ಸಾಧ್ಯವಿದೆ ಎಂದರಲ್ಲದೆ, ತಂತ್ರಜ್ಞಾನ ಯುಗದಲ್ಲಿ ಜಗತಿನ್ತ

ಜೊತೆ ಹೊಗಲು ಫೆಸ್ಬುಕ್ಕ್, ಇಮೇಲ್, ಎಸ್ ಎಮ್

ಎಸ್ ಗಳಂತಹ ಬಳಕೆಯನ್ನು ಮಾಡುವುದು ಅತಿ

ಅವಶ್ಯವಿದೆ ಎಂದರು.

ಶಿಕ್ಷಣ ನಮ್ಮ ಹಕ್ಕು ಪ್ರತಿಯೊಬ್ಬರು ಶಿಕ್ಷಣ ಕಲಿತು

ನಾಡಿಗೆ, ದೇಶಕ್ಕೆ ತಮ್ಮ ಕೊಡುಗೆ ಅಪಾರವಾಗಿದೆ

ಎಂದು ವಿಧ್ಯಾರ್ಥಿಗಳಿಗೆ ತಿಳಿಸಿ, ಸರಕಾರದ ಪ್ರತಿಭಾ

ಕಾರಂಜಿ, ಕಲಿಕಾ ಹಬ್ಬ, ಬಿಸಿಯೂಟ, ಸೈಕಲ. ಪಠ್ಯ

ಪುಸ್ತಕಗಳಂತಹ ಯೊಜನೆಗಳನ್ನು ಸರಕಾರ ಜಾರಿಗೆ

ತಂದಿದೆ ಪ್ರತಿಯೋಬ್ಬರು ಇದರ ಸದುಪಯೋಗ

ಪಡಿಸಿಕೊಳ್ಳಬೇಕೆಂದರು.

ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಜೊತೆ

ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು

ವಿಧ್ಯಾರ್ಥಿಗಳ ಪಾಲಕರು ನಮ್ಮ ಊರು, ನಮ್ಮ ಶಾಲೆ

ಬಗ್ಗೆ ಕಳಕಳಿ, ಕಾಳಜಿ ಹೊಂದುವುದು ಅವಶ್ಯವಿದೆ ಎಂದು

ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ

ಅಧ್ಯಕ್ಷ ಮಹಾದೇವ ದುರ್ಗಿ ವಹಿಸಿದರು.

ಅತಿಥಿಗಳಾಗಿ ಎಂ.ಬಿ.ಪಾಟೀಲ, ಬಸವರಾಜ

ಹುಡೇದ, ಸುನೀಲ ಈರೇಶನವರ, ರಮೇಶ ದಗಾಟೆ,

ಬಸವರಾಜ ಕಳಸನ್ನವರ, ಭೀಮಶಿ ದುರ್ಗಿ, ಎಸ್.

ಕೆ.ನದಾಫ, ಎಸ್.ಕೆ.ಕಬಾಡಗಿ, ವಾಯ್.ಎಸ್.

ಮುತ್ತಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

ಆರ್.ಆಯ್,ಕೊಲಕರ ಸ್ವಾಗತಿಸಿದರು ಆರ್.

ಎಮ್. ಹೀರೆಮಠ ಕಾರ್ಯಕ್ರಮ ನಿರೂಪಿದರು .

ಎಮ.ಜೆ. ಭೂತನ್ನವರ ವಂದಿಸಿದರು.

loading...

LEAVE A REPLY

Please enter your comment!
Please enter your name here