ಮಾನವರು ಬದುಕಲು ಪುಸ್ತಕಗಳೇ ಸೂತ್ರ: ಸರಸ್ವತಿ

0
4

ಮಾನವರು ಬದುಕಲು ಪುಸ್ತಕಗಳೇ ಸೂತ್ರ: ಸರಸ್ವತಿ
ಗೋಕಾಕ: ಮಾನವರು ಬದುಕಲು ಅದ್ಭುತವಾದ ಪುಸ್ತಕಗಳು ಮಾರ್ಗದರ್ಶನ ಸೂತ್ರಗಳು ನಮ್ಮ ದೇಶದಲ್ಲಿವೆ ಎಂದು ವಿಜಯಪುರ-ಗದಗಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ನಿರ್ಭಯಾನಂದ ಸರಸ್ವತಿಯವರು ಹೇಳಿದರು.
ಅವರು, ರವಿವಾರದಂದು ನಗರದ ಮಯೂರ ಆಂಗ್ಲಮಾಧ್ಯಮ ಶಾಲೆಯ ಸಭಾ ಭವನದಲ್ಲಿ ಇಲ್ಲಿಯ ಶ್ರಿÃ ಶಾರಧಾ ಶಕ್ತಿ ಪೀಠದ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ೪ದಿನಗಳ ಪ್ರವಚನ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಪ್ರಪಂಚದ ಯಾವುದೇ ಧರ್ಮಕ್ಕೆ ಸಂಬಂಧಪಟ್ಟ ಪದ ಇದ್ದರೆ ಅದು ಭಾರತ ದೇಶದ ವೇದಗಳ ಪದವಾಗಿರುತ್ತದೆ. ಸತ್ಯವೇ ದೇವರ ಮೂಲ ರೂಪವಾಗಿದೆ. ಕರ್ಮದ ಕಡೆ ಗಮನ ನೀಡುವದೇ ಮರ್ಕ ವೇದಸಾರ ಜೀವನ ಒಂದು ತಪಸ್ಸಾಗಿದ್ದು ಅದನ್ನು ಬಂಭೀರವಾಗಿ ಬದುಕಬೇಕು. ಮತ್ತೊಬ್ಬರಿಗೆ ತೊಂದರೆ ಮಾಡದೆ ಆಧ್ಯಾತ್ಮಿಕ ಜೀವನ ನಡೆಸಿ ಪುಣ್ಯ ಕಾರ್ಯಗಳನ್ನು ಮಾಡಿ ಪಾಪವನ್ನು ತೊಳೆದು ಕೋಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಅಧ್ಯಯನ ಕೇಂದ್ರದವರು, ಶಿವಯೋಗಿ ತತ್ವ ವಿಚಾರ ವೇದಿಕೆ ಹಾಗೂ ಭಕ್ತರು ಶ್ರಿÃಗಳನ್ನು ಸತ್ಕರಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರಿÃ ಶಾರದಾ ಶಕ್ತಿ ಪೀಠದ ಶಿವಮಯ ಮಾತಾಜಿ, ಹೊಸಪೇಠೆಯ ಪ್ರಮೋದಾ ಮಾತಾಜಿ, ಮಲ್ಲಿಕಾರ್ಜುನ ಈಟಿ, ವಿನಾಯಕ ಚಿಪ್ಪಲಕಟ್ಟಿ, ಆನಂದ ಪಾಟೀಲ, ಗಿರೀಶ, ವಸಂತ ಕುಲಕರ್ಣಿ, ರಾಮಚಂದ್ರ ಕಾಕಡೆ, ಅನುಪಾ ಕೌಶಿಕ ಸೇರಿದಂತೆ ಅನೇಕರು ಇದ್ದರು.

೦೫
^^^^^^^

loading...