ಮಾನವೀಯತೆ ಜೀವನದಲ್ಲಿ ಅಳವಡಿಸಿಕೊಳ್ಳಿ: ದಶರಥ

0
12

ಕನ್ನಡಮ್ಮ ಸುದ್ದಿ-ಧಾರವಾಡ: ಮನುಷ್ಯನು ಹುಟ್ಟಿನಿಂದ ಎನನ್ನೂ ಸಹ ಕಟ್ಟಿಕೊಂಡು ಬರುವುದಿಲ್ಲಾ ಆದರೆ ಜೀವಿಸುವ ಅವದಿಯಲ್ಲಿ ಸಾಮಾಜಕ್ಕೆ ಕೊಡುಗೆಯನ್ನು ಕೊಟ್ಟು ತಾವು ಬದುಕಿನ ಅರ್ಥವನ್ನು ಉಳಿದವರಿಗೆ ತೋರಿಸಿಕೊಡುವ ಕೆಲಸ ಮಾಡಬೇಕು. ಹುಟ್ಟು ಸಾವುಗಳ ಮಧ್ಯವಿರುವ ಜೀವಿತಾವಧಿಯಲ್ಲಿ ಏನನ್ನಾದರೂ ಸಾಧಿಸಿ ಒಳ್ಳೆಯ ಮನುಷ್ಯನಾಗಿ ಬಾಳಬೇಕು ಎಂದು ಎಸಿಎಚ್‌ಆರ್‌ನ ರಾಜ್ಯದ ಅಧ್ಯಕ್ಷ ಕೆ ದಶರಥ ಹೇಳಿದರು. ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಭ್ರಷ್ಠಾಚಾರ ನಿರ್ಮೂಲನಾ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಮತ್ತು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಧಾರವಾಡ, ಹಾವೇರಿಯ ಕಲಾ ಸ್ಪಂದನ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ ೧೨೮ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಸಂಗೀತ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ ಅಂಬೇಡ್ಕರರವರ ಸಾಧನೆಯ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವರ್ಷಪೂರ್ತಿ ಅವರ ಜಯಂತಿಯನ್ನು ಆಚರಿಸುತ್ತಾ ಮನುಷ್ಯನಾದ ಮೇಲೆ ಕನಿಷ್ಠ ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂದರು. ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೇಡರೇಷನ್‌ನ ರಾಷ್ಟಿçÃಯ ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಅಂಬೇಡ್ಕರರು ಎಲ್ಲ ವರ್ಗದದವರ ಏಳಿಗೆಗಾಗಿ ಸಂವಿಧಾನವನ್ನು ರಚಿಸಿದವರು. ಪ್ರತಿಷ್ಠಾನವು ಸದಾ ಕ್ರಿÃಯಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಮಾದರಿಯಾದ ಸಂಘವಾಗಿ ಪರಿಣಮಿಸಿದೆ. ಅಲ್ಲದೆ ಸನ್ಮಾನ, ಸತ್ಕಾರಗಳು ಮನುಷ್ಯನ ಸಾಧನೆಯಿಂದ ಬರಬೇಕು ಹಾಗೂ ಸಾಧನೆ ಹಿಂದೆ ಶ್ರಮ ಇರಬೇಕು. ಸಾಧಕರು ಸನ್ಮಾನ ಪುರಸ್ಕಾರಗಳಿಗೆ ಬೆನ್ನು ಹತ್ತಬಾರದು.
ಮನುಷ್ಯನು ಅಹಂಭಾವದಿಂದ ಬಾಳದೆ ದೇಶಪ್ರೆÃಮ, ಎಲ್ಲರೊಂದಿಗೆ ಉತ್ತಮ ಸಂಭಂಧವಿಟ್ಟುಕೊಂಡು ಬಾಳುವ ಗುಣದಿಂದ ಬಾಳಬೇಕೆಂದು ಹೇಳಿದರು. ಸಮಿತಿಯ ಕಾರ್ಯಾಧ್ಯಕ್ಷ ಬಸವರಾಜ ಆನೆಗುಂದಿ ಅಧ್ಯಕ್ಷತೆವಹಿಸಿದ್ದರು. ಎಸಿಎಚ್‌ಆರ್‌ನ ಉಪಾದ್ಯಕ್ಷ ಮಾಹಾಂತೇಶ ಬೇತೂರಮಠ, ಕಾರ್ಯದರ್ಶಿ ಕೆ.ಎಮ್.ಮಂಜುನಾಥ, ಎಸ್ ಸುಬ್ಬಾಪೂರಮಠ ಇದ್ದರು. ಇದೇ ಸಂಧರ್ಭದಲ್ಲಿ ಸಾದಕರಾದ ಅಶೋಕ ಶೆಟ್ಟರ, ಪತ್ರಕರ್ತ ರವಿಕುಮಾರ ಕಗ್ಗಣ್ಣವರ, ಕವಯತ್ರಿ ಪ್ರೆÃಮಾ ನಡುವಿನಮನಿ, ಅಕೌಂಟ್ ಆಫೀಸರ್ ಕುರ್ಷಿದ್ ಅಹ್ಮದ ಕಿತ್ತೂರ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನ ಕಾರ್ಯದರ್ಶಿ ಮಾರ್ತಾಂಡಪ್ಪ ಎಮ್ ಕತ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರೆÃಮಾನಂದ ಶಿಂದೆ ನಿರೂಪಿಸಿದರು. ಸುರೇಶ ಬೇಟಗೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಗೌರಿ ಬೇತೂರಮಠ ಅವರಿಂದ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ರಿಷಿಕೇಶ ಬೇತೂರಮಠ ತಬಲಾ ಸಾಥ, ರಮೇಶ ಕುಲಕರ್ಣಿ ಹರ‍್ಮೊÃನಿಯಂ ಸಾಥ ನೀಡಿದರು.

loading...