ಮಾನವೀಯತೆ ಮೆರೆದ ಸಚಿವ ನಿರಾಣಿ

0
117

 

ಬೆಳಗಾವಿ

ಕಾರು ಮತ್ತು ಬಸ್ ನಡುವೆ ಪರಸ್ಪರ
ಮುಖಾಮುಖಿ ಡಿಕ್ಕಿಯಾಗಿದ್ದ ವೇಳೆ ಆತಂಕಗೊಂಡಿದ್ದ ಪ್ರಯಾಣಿಕರ ಯೋಗಕ್ಷೇಮ ವಿಚಾರಿಸುವ ಮೂಲಕ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ
ಮಾನವೀಯತೆ ಮೆರೆದಿದ್ದಾರೆ.
ಇಂದು ಬೆಳಗ್ಗೆ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜರಾಹೋಣ ನೆರವೇರಿಸಲು ಯಾದಗಿರಿ ಜಿಲ್ಲೆಗೆ
ನಿಯೋಜನೆಗೊಂಡಿರುವ ಸಚಿವ ನಿರಾಣಿ ಬೆಳಗಾವಿ ರಸ್ತೆ ಮಾರ್ಗವಾಗಿ ಮುಧೋಳಕ್ಕೆ ತೆರಳುತ್ತಿದ್ದರು.
ಈ ವೇಳೆ ಬೆಳಗಾವಿ ಹೊರವಲಯದ ನೇಸರ್ಗಿ
ಸಮೀಪ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಚಿವ ಮುರುಗೇಶ್ ನಿರಾಣಿ ತಕ್ಷಣವೇ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ‌ಸೂಚಿಸಿದರು.
ಅಪಘಾತವಾಗಿರುವುದನ್ನು ಕಂಡ ಕೂಡಲೇ ಸಚಿವರು ಘಟನೆಯಲ್ಲಿ ಪ್ರಯಾಣಿಕರಿಗೆ ಏನಾದರೂ ಸಮಸ್ಯೆ ಆಗಿದೆಯೇ ಎಂಬುದನ್ನು ಖುದ್ದು ವಿಚಾರಿಸಿ ತಮಗಿರುವ ಕಳಕಳಿಯನ್ನು ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾಹಿತಿ ನೀಡಿ ಖುದ್ದು ಅಂಬುಲೆನ್ಸ್ ಬರುವ ವ್ಯವಸ್ಥೆ ಮಾಡಿ ಮಾನವೀಯತೆಯನ್ನು ತೋರಿದರು.
ಜೊತೆಗೆ ಸ್ವತಃ ಸಚಿವರೇ ಎಲ್ಲಾ ಪ್ರಯಾಣಿಕರ ಯೋಗಕ್ಷೇಮವನ್ನು ವಿಚಾರಿಸಿ ಚಿಕಿತ್ಸೆಗೆ ನೆರವು ಬೇಕಾದರೆ ತಮ್ಮ ಸಹಾಯವನ್ನು ಪಡೆಯುವಂತೆ ಮನವಿ ಮಾಡಿಕೊಂಡರು.
ಸಚಿವರ ಈ ಕಳಕಳಿಗೆ ಪ್ರಯಾಣಿಕರಿಂದ ಪ್ರಶಂಸೆನೆ ವ್ಯಕ್ತವಾಯಿತು.

loading...