ಮಾನವೀಯ ಕಳಕಳಿಯ ಸೇವೆ ಸ್ವಾಗತರ್ಹ

0
10

ಕೆರೂರ : ಧರ್ಮಸ್ಥಳ ಸಂಸ್ಥೆಯು ಅನೇಕ ಜನೋಪಯೋಗಿ ಕಾರ್ಯಗಳ ಮೂಲಕ ಗುರುತಿಸಿ ಕೊಂಡಿದ್ದು, ಈಗ ಬರದ ಬವಣೆಯಲ್ಲಿನ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಮಾನವೀಯ ಕಳಕಳಿಯ ಕಾಯಕ್ಕೆ ಮುಂದಾಗಿರುವುದು ಸ್ವಾಗತರ್ಹ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯರು ಡಾ.ಎಂ.ಜಿ. ಕಿತ್ತಲಿ ಶ್ಲಾಘಿಸಿದರು.
ಅವರು ಗ್ರಾಮಾಭಿವೃದ್ಧಿ ಯೋಜನೆಯ ಬರ ಪ್ರದೇಶಗಳಿಗೆ ಕುಡಿಯುವ ನೀರು ವಿತರಣೆ ಕಾರ್ಯಕ್ರಮದಡಿ ರಾಚೋಟೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ ಸರಳ ಕಾರ್ಯಕ್ರಮದಲ್ಲಿ ಕುಡಿಯುವ ನೀರು ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಈ ಯೋಜನೆಯಲ್ಲಿ ಬಾದಾಮಿ ತಾಲೂಕಿನ ಕೆರೂರ ಬಾದಾಮಿ ಹಾಗೂ ಗುಳೇದಗುಡ್ಡ ಪಟ್ಟಣ ಗಳಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದ್ದು ನಾಗರಿಕರು ಯೋಜನೆಯ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಸ್ಥಳೀಯ ವಿದ್ಯಾವರ್ಧಕ ಸಂಘದ ಚೇರಮನ್ ಮಹಾಂತೇಶ ಮೆಣಸಗಿ ಅವರು,
ಜೀವ ಜಲ ಅಮೂಲ್ಯವಾಗಿದ್ದು, ಅದನ್ನು ಹಿತಮಿತವಾಗಿ ಬಳಕೆ ಮಾಡಬೇಕೆಂದು ಹೇಳಿ, ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿರುವ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಪುಣ್ಯದ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವಿದೆ ಎಂದರು.
ತಾಲೂಕಾ ಯೋಜನಾಧಿಕಾರಿ ಗಣೇಶ ಡಿ ನಾಯ್ಕ ಅವರು, ಕ್ಷೆÃತ್ರ ಧರ್ಮಸ್ಥಳದ ಡಾ.ವೀರೆ Ãಂದ್ರ ಹೆಗ್ಗಡೆ ಅವರ ಆಶಯದಂತೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಟ್ಯಾಂಕರ್ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.ವಿವಿಧ ಬಡಾ ವಣೆಗಳ ಸ್ತಿçÃಯರು ಸರದಿ ಪ್ರಕಾರ ನೀರನ್ನು ಪಡೆದುಕೊಳ್ಳುವಂತೆ ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ಮಲ್ಲಪ್ಪ ಹಡಪದ, ನಿಂಗಪ್ಪ ಬಡಿಗೇರ, ಆರ್. ಎಸ್. ನಿಡೋಣಿ, ಗೋಪಾಲ ಪೂಜಾರ, ಬೆನ್ನಪ್ಪ ಮಲ್ಲಾಡದ, ಮಲ್ಲೆÃಶಿ ಮೇಡಿ, ಮೇಲ್ವಿಚಾರಕಿ ರೇಖಾ ಭಜಂತ್ರಿ ಮತ್ತು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

loading...