ಮಾನವ ಜನ್ಮ ಬರುವುದು ಒಂದೇ ಬಾರಿ

0
14

ಗರಗ : ಮನುಷ್ಯನ ಬದುಕಿಗೆ ಬದುಕಿಗೆ ಬೇಕಾದ ಚೌಕಟ್ಟನ್ನು ಶರಣರು ಅಷ್ಟಾವರಣ ರೂಪದಲ್ಲಿ ಪರಿಚಯಿಸಿದರು ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು ಹೇಳಿದರು.

ತಾಲೂಕಿನ ಗರಗ ಗ್ರಾಮದ ಸರಕಾರಿ ಶಾಲೆಯಲ್ಲಿ ಬಸವತತ್ವ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವ ಜನ್ಮ ಬರುವುದು ಒಂದೇ ಬಾರಿ. ಆ ಜನ್ಮವನ್ನು ಸಾರ್ಥಕಗೊಳಿಸಲು ಸಂಸ್ಕಾರ ಅವಶ್ಯವಾಗಿದೆ. ಅಲ್ಲದೇ ಸಂಸ್ಕಾರದೊಂದಿಗೆ ಸುಬೋಧನೆ ಹಾಗೂ ಅರಿವಿನ ಪ್ರಜ್ಞೆಗಳೂ ಮುಖ್ಯವಾಗಿವೆ ಎಂದರು.

ಭೂಮಿಯ ಮೇಲೆ ಮನುಷ್ಯನು ಶಾಶ್ವತವಾಗಿ ಉಳಿಯಲು ಬಂದಿಲ್ಲ. ಆದ್ದರಿಂದ ಇರುವಷ್ಟು ದಿನ ಉತ್ತಮ ಜೀವನ ನಡೆಸಿ ಪರರಿಗೆ ಉಪಕಾರ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಉತ್ತಮ ಗುಣಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಲು ಶರಣರು ಪ್ರತಿಪಾದಿಸಿದ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ ಎಂಬ ಅಷ್ಟಾವರಣಗಳಿಂದ ಮಾತ್ರ ಸಾಧ್ಯ ಎಂದರು.

loading...

LEAVE A REPLY

Please enter your comment!
Please enter your name here