ಮಾರಿಹಾಳ ಗ್ರಾಪಂ ಅಧ್ಯಕ್ಷನಿಗೆ ಹಿರೇಬಾಗೇವಾಡಿಯಲ್ಲಿ ಸನ್ಮಾನ

0
27

ಬೆಳಗಾವಿ-ಮಾರಿಹಾಳ ಗ್ರಾಪಂ ಅದ್ಯಕ್ಷ ತೌಸೀಫ್ ಫನೀಬಂದ್ ಅವರನ್ನು ಹಿರೇಬಾಗೇವಾಡಿ ಗ್ರಾಮದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಹಿರೇಬಾಗೇವಾಡಿ ಗ್ರಾಮದ ದರ್ಗಾ ಆವರಣದಲ್ಲಿ ದರ್ಗಾ ಅಜ್ಜನವರು ತೌಸೀಫ್ ಫನೀಬಂಧ್ ಅವರನ್ನು ಸತ್ಕರಿಸಿ ಆಶಿರ್ವದಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ತೌಸೀಫ್ ಫನೀಬಂಧ್, ಮಾರಿಹಾಳ ಗ್ರಾಪಂ ಅದ್ಯಕ್ಷನಾದ ಮೇಲೆ ಜವಾಬ್ದಾರಿ ಹೆಚ್ಚಾಗಿದೆ.ಮಾರಿಹಾಳ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದೇನೆ,ಗ್ರಾಮದ ಮನೆ,ಮನೆಗೂ ಶುದ್ಧ ಕುಡಿಯುವ ನೀರಿನ ವ್ಯೆವಸ್ಥೆ ಮಾಡುವದು,ಮೊದಲ ಗುರಿಯಾಗಿದೆ.ಎಂದು ತೌಸೀಫ್ ಹೇಳಿದರು.
ಮಾರಿಹಾಳ ಗ್ರಾಮವನ್ನು ಹಸಿರು ಗ್ರಾಮ,ನೂರಕ್ಕೆ ನೂರರಷ್ಟು ಗ್ರಾಮಸ್ಥರನ್ನು ಸುಶಿಕ್ಷಿತ ಗೊಳಿಸಲು,ಅಕ್ಷರ ಗ್ರಾಮ,ಯೋಜನೆಯನ್ನು ರೂಪಿಸುತ್ತಿದ್ದೇನೆ,ಈ ಕುರಿತು ಮಾರಿಹಾಳ ಗ್ರಾಮದ ಹಿರಿಯರ ಸಲಹೆ ಪಡೆದು,ಸದಸ್ಯರ ಜೊತೆ ಚರ್ಚೆ ಮಾಡಿ,ಅಕ್ಷರ ಗ್ರಾಮ,ಮತ್ತು ಹಸಿರು ಗ್ರಾಮ ಯೋಜನೆಗಳ ರೂಪುರೇಷೆ ಸಿದ್ಧ ಮಾಡುತ್ತೇನೆ,ಇದಾದ ಬಳಿಕ ಈ ಎರಡೂ ಯೋಜನೆಗಳನ್ನು ಗ್ರಾಮದಲ್ಲಿ ಅನುಷ್ಠಾನ ಮಾಡುತ್ತೇನೆ.ಎಂದು ತೌಸೀಫ್ ಫನೀಬಂಧ್ ಭರವಸೆ ನೀಡಿದರು.
ದರ್ಗಾ ಅಜ್ಜನವರು ಮಾತನಾಡಿ ಅಧಿಕಾರ ಸಿಕ್ಕಾಗ ಜನರ ಸೇವೆ ಮಾಡಬೇಕು,ಅಧಿಕಾರದ ಅವಧಿಯನ್ನು ಸಮರ್ಪಕವಾಗಿ ಬಳಿಸಿಕೊಂಡು,ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರ ಕಷ್ಟಗಳನ್ನು ನಿವಾರಿಸುವ ಸೇವೆ ಮಾಡಬೇಕು ಎಂದು ಆಶಿರ್ವದಿಸಿದರು.
ಈ ಸಂಧರ್ಭದಲ್ಲಿ ಹಿರೇಬಾಗೇವಾಡಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

 

loading...