ಮೀನಿಗೆ ಹಾಕಿದ ಬಲೆಗೆ ಬಿದ್ದ 22 ಮೊಸಳೆ ಮರಿ, ಮೊಟ್ಟೆಗಳು

0
256

 

ಕನ್ನಡಮ್ಮ ಸುದ್ದಿ
ಬೆಳಗಾವಿ: 10 ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹಲ್ಯಾಳ ಗ್ರಾಮದಲ್ಲಿ ೨೨ ಮೊಸಳೆ ಮರಿಗಳು, ೬ ಮೊಟ್ಟೆಗಳು ಪತ್ತೆ ಆಗಿ ನದಿ ತೀರದ ಜನರಲ್ಲಿ ಆತಂಕ ಮೂಡಿಸಿದೆ.
ಹಲ್ಯಾಳ ಗ್ರಾಮದಲ್ಲಿ ಮೊಸಳೆಯೊಂದು ಮೊಟ್ಟೆ ಇಟ್ಟು ೨೨ ಮರಿಗಳಿಗೆ ಜನ್ಮ ನೀಡಿದೆ, ಜೊತೆಗೆ ೬ ಮೊಸಳೆ ಮೊಟ್ಟೆಗಳು ಪತ್ತೆ ಯಾಗಿವೆ. ಹಲ್ಯಾಳ ಗ್ರಾಮದ ಮೀನುಗಾರರು ನದಿಯಲ್ಲಿ ಇಂದು ಮೀನು ಹಿಡಿಯಲು ಕೃಷ್ಣಾ ನದಿ ತೀರದಲ್ಲಿ ಬಲೆಯನ್ನು ಹಾಕಿದ್ದರೆ,
ಆ ಬಲೆಗೆ ಮೀನುಗಳ ಜೊತೆಗೆ ಮೊಸಳೆ ಮರಿಗಳು ಬಲೆಗೆ ಬಿದ್ದಿವೆ. ಬಲಿಗೆ ಬಿದ್ದ ಮೊಸಳೆ ಮರಿಗಳ ರಕ್ಷಣೆಮಾಡಿ, ಸುರಕ್ಷಿತವಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದ್ದರೆ. ಇನ್ನು ಅರಣ್ಯ ಇಲಾಖೆ ಮರಿ ಮೊಸಳೆಗಳನ್ನ ವಶಕ್ಕೆ ಪಡೆದು, ಬೆಳಗಾವಿ ಮೃಗಾಲಯಕ್ಕೆ ಸ್ಥಳಾಂತರಿಸಲು ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ೨೨ಮರಿ ಮೊಸಳೆಗಳು ಮತ್ತು ೬ಮೊಟ್ಟೆಗಳನ್ನ ನೋಡಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ..

loading...